BCCI ಏಕದಿನ ಟ್ರೋಫಿ ಮಹಿಳಾ ಕ್ರಿಕೆಟ್ ಟೂರ್ನಿ| ದಿವ್ಯಾ ಶತಕ: ಕರ್ನಾಟಕ ಜಯಭೇರಿ
ಬೆಂಗಳೂರು: ದಿವ್ಯಾ ಜ್ಞಾನಾನಂದ (ಔಟಾಗದೆ 100) ಅವರು ಗಳಿಸಿದ ಶತಕದ ಬಲದಿಂದ ಕರ್ನಾಟಕ ತಂಡವು ಬಿಸಿಸಿಐ ಏಕದಿನ ಟ್ರೋಫಿ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕರ್ನಾಟಕ ಒಂಬತ್ತು ವಿಕೆಟ್ಗಳಿಂದ ತಮಿಳುನಾಡು ತಂಡವನ್ನು ಸೋಲಿಸಿತು.
ಮೊದಲು ಬ್ಯಾಟ್ ಮಾಡಿದ ತಮಿಳುನಾಡು ತಂಡವು 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿದರು. ಕರ್ನಾಟಕ ಈ ಗುರಿಯನ್ನು 27.3 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು ತಲುಪಿತು. 81 ಎಸೆತಗಳನ್ನು ಎದುರಿಸಿದ ದಿವ್ಯಾ 16 ಬೌಂಡರಿ ಮತ್ತು ಎರಡು ಸಿಕ್ಸರ್ ಸಿಡಿಸಿದರು.
ಸಂಕ್ಷಿಪ್ತ ಸ್ಕೋರು: ತಮಿಳುನಾಡು: 50 ಓವರ್ಗಳಲ್ಲಿ 8 ವಿಕೆಟ್ಗೆ 157 (ಎಸ್. ಅನುಷಾ ಔಟಾಗದೆ 57, ಕೆ.ಎನ್. ರಮ್ಯಶ್ರೀ 23; ಮೋನಿಕಾ ಸಿ. ಪಟೇಲ್ 28ಕ್ಕೆ 2, ಸಹನಾ ಎಸ್. ಪವಾರ್ 37ಕ್ಕೆ 2). ಕರ್ನಾಟಕ: 27.3 ಓವರ್ಗಳಲ್ಲಿ 1 ವಿಕೆಟ್ಗೆ 163 (ಶುಭಾ ಸತೀಶ್ ಔಟಾಗದೆ 38, ವೃಂದಾ ದಿನೇಶ್ 23, ದಿವ್ಯಾ ಜ್ಞಾನಾನಂದ ಔಟಾಗದೆ 100). ಫಲಿತಾಂಶ: ಕರ್ನಾಟಕ ತಂಡಕ್ಕೆ 9 ವಿಕೆಟ್ಗಳ ಜಯ