25 ಪರಿಶಿಷ್ಟ ವಿದ್ಯಾರ್ಥಿಗಳನ್ನು ಹಾಸ್ಟೆಲ್ ನಿಂದ ಹೊರಹಾಕಿದ್ದು ಖಂಡನೀಯ' : ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ

25 ಪರಿಶಿಷ್ಟ ವಿದ್ಯಾರ್ಥಿಗಳನ್ನು ಹಾಸ್ಟೆಲ್ ನಿಂದ ಹೊರಹಾಕಿದ್ದು ಖಂಡನೀಯ' : ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ

ಬೆಂಗಳೂರು : ಕಳಪೆ ಆಹಾರದ ವಿರುದ್ಧ ದನಿ ಎತ್ತಿದ 25 ಪರಿಶಿಷ್ಠ ವಿದ್ಯಾರ್ಥಿಗಳನ್ನು ಹಾಸ್ಟೆಲ್ ನಿಂದ ಹೊರಹಾಕಿದ್ದು ಖಂಡನೀಯ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಬಿಜೆಪಿ ಆಡಳಿತದಲ್ಲಿ ಯಾರೂ ಏನನ್ನೂ ಪ್ರಶ್ನಿಸಬಾರದೇ?

ಬಳ್ಳಾರಿಯಲ್ಲಿ ಕಳಪೆ ಆಹಾರದ ವಿರುದ್ಧ ದನಿ ಎತ್ತಿದ 25 ಪರಿಶಿಷ್ಠ ವಿದ್ಯಾರ್ಥಿಗಳನ್ನು ಹಾಸ್ಟೆಲ್ನಿಂದ ಹೊರಹಾಕಿದ್ದು ಖಂಡನೀಯ. ಬೊಮ್ಮಾಯಿ ಅವರೇ, ವಿದ್ಯಾರ್ಥಿಪರ ಕಾಳಜಿ ಇದ್ದಿದ್ದೇ ಆದರೆ ಜಿಲ್ಲಾಧಿಕಾರಿ ಹಾಗೂ ವಾರ್ಡನ್ ವಿರುದ್ಧ ಕ್ರಮ ಜರುಗಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಬಿಜೆಪಿ ದಲಿತ ವಿರೋಧಿ ಎಂಬುದನ್ನು ಪದೇ ಪದೇ ನಿರ್ಲಜ್ಜವಾಗಿ ಸಾಬೀತು ಮಾಡುತ್ತಿದೆ. ಹಿಂದೆ SCP, TSP ಅನುದಾನವನ್ನು ಬೇರೆಡೆ ವರ್ಗಾಯಿಸಲಾಗಿತ್ತು. ಈಗ ಅಲೆಮಾರಿ ಸಮುದಾಯಗಳ ವಸತಿ ಯೋಜನೆಯ ₹300 ಕೋಟಿಯನ್ನು ಬೇರೆಡೆ ವರ್ಗಾಯಿಸಲಾಗಿದೆ. ಅತಿ ಸೂಕ್ಷ್ಮ ಹಾಗೂ ದುರ್ಬಲ ಸಮುದಾಯಗಳ ವಸತಿ ಕನಸಿಗೆ ಕೊಳ್ಳಿ ಇಟ್ಟಿದೆ ಈ ಸರ್ಕಾರ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.