'2024ರ ಅಂತ್ಯಕ್ಕೆ ನಮ್ಮ ರಸ್ತೆಗಳ ಗುಣಮಟ್ಟ ಅಮೆರಿಕ ರಸ್ತೆಗಳ ಗುಣಮಟ್ಟಕ್ಕೆ ಸಮಾನವಾಗಿರಲಿದೆ'

'2024ರ ಅಂತ್ಯಕ್ಕೆ ನಮ್ಮ ರಸ್ತೆಗಳ ಗುಣಮಟ್ಟ ಅಮೆರಿಕ ರಸ್ತೆಗಳ ಗುಣಮಟ್ಟಕ್ಕೆ ಸಮಾನವಾಗಿರಲಿದೆ'

ಭಾರತದ ರಸ್ತೆಗಳು 2024ರ ಅಂತ್ಯದ ವೇಳೆಗೆ ಅಮೆರಿಕ ರಸ್ತೆಗಳ ಗುಣಮಟ್ಟಕ್ಕೆ ಸಮನಾಗಿರುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಎಫ್‌ಐಸಿಸಿಐ 95ನೇ ವಾರ್ಷಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ದೇಶದಲ್ಲಿ ವರ್ಲ್ಡ್ ಸ್ಟ್ಯಾಂಡರ್ಡ್ ರೋಡ್ ಮೂಲಸೌಕರ್ಯವನ್ನು ಮಾಡುತ್ತಿದ್ದೇವೆ. ನಮ್ಮ ಲಾಜಿಸ್ಟಿಕ್ಸ್ ವೆಚ್ಚವು ದೊಡ್ಡ ಸಮಸ್ಯೆಯಾಗಿದೆ. ಪ್ರಸ್ತುತ ಇದು ಶೇ. 16 ಇದೆ. ಇದನ್ನು 24ರ ಅಂತ್ಯದ ವೇಳೆಗೆ ಶೇ. 9ಕ್ಕೆ ಇಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.