2013ರ ಅತ್ಯಾಚಾರ ಪ್ರಕರಣ ; ಸ್ವಯಂ ಘೋಷಿತ ದೇವಮಾನವ 'ಅಸಾರಾಮ್ ಬಾಪು'ಗೆ ಜೀವಾವಧಿ ಶಿಕ್ಷೆ

2013ರ ಅತ್ಯಾಚಾರ ಪ್ರಕರಣ ; ಸ್ವಯಂ ಘೋಷಿತ ದೇವಮಾನವ 'ಅಸಾರಾಮ್ ಬಾಪು'ಗೆ ಜೀವಾವಧಿ ಶಿಕ್ಷೆ

ವದೆಹಲಿ: 2013ರಲ್ಲಿ ಗುಜರಾತ್'ನ ಆಶ್ರಮವೊಂದರಲ್ಲಿ ಸೂರತ್ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪುಗೆ ಗಾಂಧಿನಗರದ ನ್ಯಾಯಾಲಯ ಜೀವವಧಿ ಶಿಕ್ಷೆ ವಿಧಿಸಿದೆ.

ಅತ್ಯಾಚಾರ ಪ್ರಕರಣದಲ್ಲಿ ಅಸಾರಾಮ್'ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ನಿನ್ನೆ ಗುಜರಾತ್'ನ ಸೆಷನ್ಸ್ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿತ್ತು. ಈಗ ಅದೇ ಸಂಚಿಕೆಯಲ್ಲಿ ಇಂದು ತೀರ್ಪು ಪ್ರಕಟವಾಗಿದೆ. ಇದಕ್ಕೂ ಮುನ್ನ ಅಸಾರಾಮ್ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ೀಗ ಮತ್ತೊಮ್ಮೆ ತಪ್ಪಿತಸ್ಥನೆಂದು ಸಾಬೀತಾದ ನಂತ್ರ ತೊಂದರೆಗಳು ಹೆಚ್ಚಾಗಲಿವೆ.