2 ನೇ 'FIR' ರದ್ದು ಕೋರಿ ಡಿಕೆಶಿ ಅರ್ಜಿ : ಮಾ.16 ಕ್ಕೆ ವಿಚಾರಣೆ ಮುಂದೂಡಿದ ದೆಹಲಿ ಹೈಕೋರ್ಟ್

ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಇ.ಡಿಯಿಂದ 2 ನೇ ಎಫ್ ಐ ಆರ್ ದಾಖಲಾಗಿದ್ದು, ಎಫ್ ಐ ಆ ರ್ ರದ್ದು ಕೋರಿ ಡಿಕೆಶಿ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಇದೀಗ ಅರ್ಜಿಯನ್ನು ಮಾ.16 ಕ್ಕೆ ಮುಂದೂಡಿ ದೆಹಲಿ ಹೈಕೋರ್ಟ್ ಆದೇಶಿಸಿದೆ. ನ್ಯಾಯಾಧೀಶರ ಗೈರು ಹಿನ್ನೆಲೆ ಮಾ.16 ಕ್ಕೆ ವಿಚಾರಣೆಯನ್ನು ಮುಂದೂಡಿ ಆದೇಶ ಹೊರಡಿಸಿದೆ.
ತನ್ನ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ರದ್ದುಗೊಳಿಸುವಂತೆ ಡಿಕೆ ಶಿವಕುಮಾರ್ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದರು.