ವಿವಿಧ ಬೇಡಿಕೆ ಈಡೇರಿಕೆಗೆ ಲಾರಿ ಮಾಲೀಕರ ಆಗ್ರಹ:2 ದಿನಗಳಿಂದ ಬೆಂಗಳೂರಿನಲ್ಲಿ ನಂದಿನಿ ಹಾಲು ಪೂರೈಕೆ ವ್ಯತ್ಯಯ

ವಿವಿಧ ಬೇಡಿಕೆ ಈಡೇರಿಕೆಗೆ ಲಾರಿ ಮಾಲೀಕರ ಆಗ್ರಹ:2 ದಿನಗಳಿಂದ ಬೆಂಗಳೂರಿನಲ್ಲಿ ನಂದಿನಿ ಹಾಲು ಪೂರೈಕೆ ವ್ಯತ್ಯಯ

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೆಎಂಎಫ್ ಲಾರಿ ಮಾಲೀಕರು ಹಾಗೂ ಚಾಲಕರು ಮುಷ್ಕರ ಕೈಗೊಂಡಿದ್ದಾರೆ.

ಹಾಗಾಗಿ ಬೆಂಗಳೂರು ನಗರದ ಹಲವೆಡೆ ಕಳೆದ 2 ದಿನಗಳಿಂದ ನಂದಿನಿ ಹಾಲು ಸರಬರಾಜಿನಲ್ಲಿ ವ್ಯತ್ಯಯವಾಗಿದೆ.

ಇದರಿಂದ ಹಾಲು ಸಿಗದೇ ನಂದಿನಿ ಬೂತ್‌ ಬಂದು ಜನರು ವಾಪಸ್‌ ಆಗುತ್ತಿದ್ದಾರೆ ಎಂದು ತಿಳಿದುಬಂದಿದೆ.ಹಾಲು ಪೂರೈಕೆದಾರರಿಗೆ ಹೆಚ್ಚಿನ ಹಣ ನಿಗದಿ ಮಾಡುವಂತೆ ಒತ್ತಾಯಿಸಿದ್ದಾರೆ.ಕಳೆದ 2 ದಿನಗಳಿಂದ ಲಾರಿ ಮಾಲೀಕರು ಬಮೂಲ್ ಹಾಲು ವಿತರಣೆ ನಿಲ್ಲಿಸಿದ್ದು, ಇದರಿಂದ ನಗರದ ಹಲವೆಡೆ ನಂದಿನಿ ಹಾಲು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿದೆ. ಒಂದು ಟ್ರಿಪ್‌ಗೆ ಬಮೂಲ್ 1,000-1,200 ರೂಪಾಯಿ ನೀಡಲಾಗುತ್ತಿದೆ. ಆದರೆ ಕಿ.ಮೀ ಆಧಾರದ ಮೇಲೆ ಪಾವತಿ ಹಣವನ್ನು ಹೆಚ್ಚು ಮಾಡುವಂತೆ ಒತ್ತಾಯಿಸಲಾಗಿದೆ. ಇದೇ ವೇಳೆ ಲಾರಿ ಮಾಲೀಕರು ನಮ್ಮ ಬೇಡಿಕೆ ಈಡೇರಿಕೆ ತನಕ ಗಾಡಿ ತೆಗೆಯಲ್ಲ ಎಂದು ಪಟ್ಟು ಹಿಡಿದಿದ್ದಾರೆ.