ಬೆಂಗಳೂರಿನಲ್ಲಿ ಕಳ್ಳರ ಹಾವಳಿ: ವಾಟರ್‌ ಮೀಟರ್‌ ಎಗರಿಸಿದ ಖದೀಮರ

ಬೆಂಗಳೂರಿನಲ್ಲಿ ಕಳ್ಳರ ಹಾವಳಿ: ವಾಟರ್‌ ಮೀಟರ್‌ ಎಗರಿಸಿದ ಖದೀಮರ

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದಾರೆ. ನಗರದಲ್ಲಿ ದಿನಕ್ಕೆ ಎರಡು ಪ್ರಕರಣಗಳು ಬಯಲಾಗಿಬರುತ್ತದೆ. ಆದ್ರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ನಗರದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಮನೆಗಳಿಗೆ ಅಳವಡಿಸಿರುವ ವಾಟರ್‌ ಮೀಟರ್‌ ಗಳ ಖದೀಮರು ಕದ್ದಿದ್ದಾರೆ. ಕಳ್ಳರು ಸ್ಕೂಲ್‌ ಬ್ಯಾಗ್‌ ಹಾಕಿಕೊಂಡು ಕಳ್ಳತನ ಮಾಡುತ್ತಿದ್ದಾರೆ. ಮನೆ ಮುಂದೆ ಅಳವಡಿಸಿರುವ ವಾಟರ್‌ ಮೀಟರ್‌ ಕಳ್ಳತನ ಮಾಡಿಉವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಲಾಲ್‌ ಬಾಗ್‌ ಬಳಿ ಇರುವ ಚಿಕ್ಕ ಮಾವಳ್ಳಿ ಇಂಥ ಕೃತ್ಯ ನಡೆದಿದೆ. ಬಿಡಬ್ಲ್ಯೂ ಎಸ್‌ ಬಿಗೆ ಸೇರಿದ ವಾಟರ್‌ ಮೀಟರ್‌ ಅನ್ನು ಕಳ್ಳತನ ಮಾಡಲಾಗಿದೆ. ಈ ಭಾಗದಲ್ಲಿ ಹಲವೆಡೆ ವಾಟರ್‌ ಮೀಟರ್‌ ಕಳ್ಳತನ ನಡೆದಿದೆ ಎಂದು ಜನರು ದೂರಿದ್ದಾರೆ.