ತಮಿಳುನಾಡಿನಲ್ಲಿ 'ಜಲ್ಲಿಕಟ್ಟು' ವೀಕ್ಷಣೆ ವೇಳೆ ಗೂಳಿ ತಿವಿದು 14 ವರ್ಷದ ಬಾಲಕ ಸಾವು

ತಮಿಳುನಾಡಿನಲ್ಲಿ 'ಜಲ್ಲಿಕಟ್ಟು' ವೀಕ್ಷಣೆ ವೇಳೆ ಗೂಳಿ ತಿವಿದು 14 ವರ್ಷದ ಬಾಲಕ ಸಾವು

ಮಿಳುನಾಡು : ತಮಿಳುನಾಡಿನ ಧರ್ಮಪುರಿಯಲ್ಲಿ ನಡೆದ ಗೂಳಿ ಪಳಗಿಸುವ ಕ್ರೀಡೆ ಜಲ್ಲಿಕಟ್ಟು ವೀಕ್ಷಿಸಲು ಬಂದಿದ್ದ 14 ವರ್ಷದ ಬಾಲಕ ಗೂಳಿಯೊಂದರ ದಾಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ನಡೆದಿದೆ.

ಮೃತ ಬಾಲಕನನ್ನು ಗೋಕುಲ್ (14) ಎಂದು ಗುರುತಿಸಾಗಿದ್ದು, ಈತ ತಡಂಗಂ ಗ್ರಾಮದಲ್ಲಿ ನಡೆದ ಜಲ್ಲಿಕಟ್ಟು ವೀಕ್ಷಿಸಲು ತನ್ನ ಸಂಬಂಧಿಕರೊಂದಿಗೆ ತೆರಳಿದ್ದನು. ಈ ವೇಳೆ ಗೂಳಿಯೊಂದು ಆತನ ಹೊಟ್ಟೆಗೆ ಕೊಂಬಿನಿಂದ ತಿವಿದು ತೀವ್ರವಾಗಿ ಗಾಯಗೊಂಡಿದ್ದನು. ಕೂಡಲೇ ಬಾಲಕನನ್ನು ಅ ಧರ್ಮಪುರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಧರ್ಮಪುರಿ ಪೊಲೀಸರು ತನಿಖೆ ಆರಂಭಿಸಿದ್ದು, ಗೋಕುಲ್ ಹೇಗೆ ಗಾಯಗೊಂಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಈ ವರ್ಷ ಜಲ್ಲಿಕಟ್ಟು ಸಂಬಂಧ ಸಾವನ್ನಪ್ಪಿದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಜಲ್ಲಿಕಟ್ಟು ಎಂದರೇನು?

ಜಲ್ಲಿಕಟ್ಟು ಜನವರಿ ಮಧ್ಯದಲ್ಲಿ ಪೊಂಗಲ್ ಸುಗ್ಗಿಯ ಸಮಯದಲ್ಲಿ ತಮಿಳುನಾಡಿನಲ್ಲಿ ಆಚರಿಸುವ ಜನಪ್ರಿಯ ಕ್ರೀಡೆಯಾಗಿದೆ. ಗೂಳಿಯನ್ನು ಪಡಗಿಸಿ ಅದರ ಗೂನು ಮೇಲೆ ಹಿಡಿದಿರುವ ಅವಧಿಯಿಂದ ವಿಜೇತರನ್ನು ನಿರ್ಧರಿಸಲಾಗುತ್ತದೆ.