ಹೈಕೋರ್ಟ್ ಮೆಟ್ಟಿಲೇರಿದ ನಟಿ ಕಂಗನಾ ರಣಾವತ್: ಕಾರಣವೇನು?

ಹೈಕೋರ್ಟ್ ಮೆಟ್ಟಿಲೇರಿದ ನಟಿ ಕಂಗನಾ ರಣಾವತ್: ಕಾರಣವೇನು?

ಬಾಲಿವುಡ್ ನಟಿ ಕಂಗನಾ ರಣಾವತ್ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಒಂದಲ್ಲೊಂದು ಕಿರಿಕ್ ಮಾಡಿಕೊಂಡು, ಪೊಲೀಸ್ ಸ್ಟೇಷನ್, ಕೋರ್ಟ್ ಅಲೆಯುತ್ತಿರುವ ಕಂಗನಾ ಇದೀಗ ಮತ್ತೆ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಬಾರಿ ಕಂಗನಾ ಹೈಕೋರ್ಟ್ ಮೆಟ್ಟಿಲೇರಿರುವುದು ತನ್ನ ಪಾರ್ಟ್ ಪೋರ್ಟ್ ನವೀಕರಣಕ್ಕೆ ಅನುಮತಿ ನೀಡಬೇಕೆಂದು ಕೋರಿ. ಆದರೆ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, "ಅರ್ಜಿ ಅಸ್ಪಷ್ಟವಾಗಿದೆ ಮತ್ತು ಎಲ್ಲಾ ದಾಖಲೆಗಳನ್ನು ಇರಿಸಿಲ್ಲ" ಎಂದು ಹೇಳಿದೆ.

ಸೆಪ್ಟಂಬರ್ 15ಕ್ಕೆ ಕಂಗನಾ ಪಾಸ್ ಪೋರ್ಟ್ ಅವಧಿ ಮುಕ್ತಾಯವಾಗಲಿದೆ. ಕಂಗನಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದ್ದರಿಂದ ಪಾಸ್ ಪೋರ್ಟ್ ನವೀಕರಿಸಲು ಸಲ್ಲಿಸಿದ್ದ ಅರ್ಜಿಯನ್ನು ಪಾಸ್ ಪೋರ್ಟ್ ಪ್ರಾಧಿಕಾರ ತಿರಸ್ಕರಿಸಿದೆ. ಹಾಗಾಗಿ ಕಂಗನಾ ಕೋರ್ಟ್ ಮೊರೆಹೋಗಿದ್ದಾರೆ.

ಕಂಗನಾ ಪರ ವಕೀಲ ರಿಜ್ವಾನ್ ಸಿದ್ಧಿಕಿ ಮೂಲಕ ಸಲ್ಲಿಸಿದ್ದ ಅರ್ಜಿಯಲ್ಲಿ, "ಕಂಗನಾ ರಣಾವತ್ ಮತ್ತು ಅವರ ಸಹೋದರಿ ರಂಗೋಲಿ ವಿರುದ್ಧ ಈ ವರ್ಷದ ಆರಂಭದಲ್ಲಿ ಬಾಂದ್ರಾ ಪೊಲೀಸರು ಎಫ್ ಐ ಆರ್ ದಾಖಲಿಸಿದ ಕಾರಣ ಪಾಸ್ ಪೋರ್ಟ್ ನವೀಕರಿಸಲು ನಿರಾಕರಿಸಿದ್ದಾರೆ" ಎಂದು ಹೇಳಿದ್ದಾರೆ.

"ಈ ವಾರದ ನಂತರ ಕಂಗನಾ ರಣಾವತ್ ಅವರ ಚಿತ್ರದ ಚಿತ್ರೀಕರಣ ವೇಳಪಟ್ಟಿ ಸಿದ್ಧವಾಗಿದೆ. ಕಂಗನಾ ರಾಣವಾತ್ ಅವರು ಭಾರತದಿಂದ ಹೊರ ಹೋಗುವ ಅಗತ್ಯವಿದೆ" ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಇದೀಗ ಜೂನ್ 25ಕ್ಕೆ ವಿಚಾರಣೆ ಮುಂದೂಲಾಗಿದೆ.