ಹೆಚ್‌ಡಿಕೆಗೆ ಸಿಕ್ತು ಪಿಳ್ಳಂಗರೆ ಲಕ್ಷ್ಮೀ ವೆಂಕಟರಮಣನ ಆಶೀರ್ವಾದ

ಹೆಚ್‌ಡಿಕೆಗೆ ಸಿಕ್ತು ಪಿಳ್ಳಂಗರೆ ಲಕ್ಷ್ಮೀ ವೆಂಕಟರಮಣನ ಆಶೀರ್ವಾದ

ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಅವರಿಗೆ ವೆಂಕಟರಮಣ ಸ್ವಾಮಿ ಎರಡು ಬಾರಿ ವರ ನೀಡಿದ್ದಾನೆ. ಪಿಳ್ಳಂಗೆರೆಯ ಲಕ್ಷ್ಮೀ ವೆಂಕಟರಮಣ ದೇಗುಲದಲ್ಲಿ ಹೆಚ್‌ಡಿಕೆ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಮಾಜಿ ಶಾಸಕಿ ಶಾರದಾ ಪೂರ್ಯಾ ನಾಯ್ಕ, ದೇವರು ಹೆಚ್​​ಡಿಕೆಗೆ ಆರೋಗ್ಯ, ಆಯಸ್ಸು ನೀಡಲಿ ಎಂದು ಅರ್ಚನೆ ಮಾಡಿಸುತ್ತಿದ್ದರು. ಈ ವೇಳೆ ಬಲಗಡೆಯಿಂದ ವೆಂಕಟರಮಣ ಸ್ವಾಮಿ ಹೂವಿನ ವರ ನೀಡಿದ್ದಾನೆ. ಒಂದಲ್ಲ, ಎರಡು ಬಾರಿ ಹೂವಿನ ವರ ನೀಡಿದ್ದಾನೆ.