ಹುಬ್ಬಳ್ಳಿಯಲ್ಲಿ ಮತ್ತೆ ರಕ್ತಪಾತ; ಮಾವನನ್ನೇ ಚಾಕುವಿನಿಂದ ಇರಿದು ಹತ್ಯೆಗೈದ ಅಳಿಯ

ಹುಬ್ಬಳ್ಳಿಯಲ್ಲಿ ಮತ್ತೆ ರಕ್ತಪಾತ; ಮಾವನನ್ನೇ ಚಾಕುವಿನಿಂದ ಇರಿದು ಹತ್ಯೆಗೈದ ಅಳಿಯ

ಹುಬ್ಬಳ್ಳಿ: ಜಿಲ್ಲೆಯ ಸುಳ್ಯ ಗ್ರಾಮದಲ್ಲಿ ಮಾವನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.

ಆಸ್ತಿ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿತ್ತು. 56 ವರ್ಷದ ಶಿವಪ್ಪ ಮಳ್ಳೊಳ್ಳಿ ಕೊಲೆಯಾದ ವ್ಯಕ್ತಿ. ಕೆಲವು ವರ್ಷಗಳಿಂದ ಆಸ್ತಿ ವಿಚಾರಕ್ಕಾಗಿ ಅಳಿಯಂದಿರ ನಡುವೆ ಜಗಳ ನಡೆಯುತ್ತಿತ್ತು.

ಆದರೆ ಆ ಜಗಳ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ. ಅಳಿಯಂದಿರಾದ ಗುರುಪ್ಪ, ಷಣ್ಮುಖ, ಗಂಗಾಪ್ಪಹಾಗೂ ಸಿದ್ರಾಮ ಕೊಲೆ ಮಾಡಿದ ಆರೋಪಿಗಳು. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.