ಹುಣಸೂರು 2 ಚೆಕ್ ಪೋಸ್ಟ್ಗಳಲ್ಲಿ ಹೈ ಅಲರ್ಟ್ : 15.26 ಲಕ್ಷ ವಶಕ್ಕೆ ಪಡೆದ ಚುನಾವಣಾಧಿಕಾರಿಗಳು
ಹುಣಸೂರು: ಮುಂದಿನ ಚುನಾವಣೆಗೆ ಮತದಾರರನ್ನು ಸೆಳೆಯೋದಕ್ಕೆ ರಾಜ್ಯದೆಲ್ಲೆಡೆ ದಾಖಲೆಯಿಲ್ಲ ಹಣ, ಹೆಂಡ, ಕುಕ್ಕರ್ , ಸೀರೆ ಹಂಚುತ್ತಿರುವುದು ಪತ್ತೆಯಾಗಿದೆ. ಈ ಬೆನ್ನಲ್ಲೆ ಇದೀಗ ಹುಣಸೂರು-ಮಡಿಕೇರಿ ಹೆದ್ದಾರಿಯ ಚಿಲ್ಕುಂದ ಚೆಕ್ ಪೋಸ್ಟ್ನಲ್ಲಿ ದಾಖಲೆ ಯಿಲ್ಲದ 15.26 ಲಕ್ಷರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ
ಹುಣಸೂರು-ಮಡಿಕೇರಿ ಹೆದ್ದಾರಿಯಲ್ಲಿ ಚುನಾವಣಾಧಿಕಾರಿಗಳು ಹೈ ಅಲರ್ಟ್ ಆಗಿದ್ದು, ದಾಖಲೆ ಯಿಲ್ಲದ ವಸ್ತುಗಳನ್ನು ರವಾನಿಸುತ್ತಿರುವ ವಾಹನಗಳನ್ನು ನಿಲ್ಲಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹುಣಸೂರು-ಮಡಿಕೇರಿ ಹೆದ್ದಾರಿಯ ಚಿಲ್ಕುಂದ ಚೆಕ್ ಪೋಸ್ಟ್ನಲ್ಲಿ ದಾಖಲೆ ಯಿಲ್ಲದ 15.26 ಲಕ್ಷರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.
ಇನ್ನೂ ಮಾರ್ಚ್.31ರ ಮಧ್ಯರಾತ್ರಿ ಕೇರಳ ಮೂಲದವರಿಂದ ಹುಣಸೂರು-ಮಡಿಕೇರಿ ಹೆದ್ದಾರಿಯ ಚಿಲ್ಕುಂದ ಚೆಕ್ ಪೋಸ್ಟ್ನಲ್ಲಿ8.91ಲಕ್ಷರೂ ಹಾಗೂ ಏ.1 ರ ಮದ್ಯಾಹ್ನ ಇದೇ ಚೆಕ್ಪೋಸ್ಟ್ನಲ್ಲಿ ಮೈಸೂರಿನ ಬೋಗಾದಿ ರಸ್ತೆಯ ಕೃಷ್ಣ ಪೌಲ್ಟಿಗೆ ಸೇರಿದ 5.68 ಲಕ್ಷರೂ ಹಾಗೂ ಮಾ.30ರಂದು ಹುಣಸೂರು-ವಿರರಾಜಪೇಟೆ ರಸ್ತೆಯ ಮುತ್ತುರಾಯನಹೊಸಳ್ಳಿ ಚೆಕ್ಪೋಸ್ಟ್ನಲ್ಲಿ 67ಸಾವಿರ ರೂ ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾಧಿಕಾರಿ ರುಚಿ ಬಿಂದಾಲ್ ತಿಳಿಸಿದ್ದಾರೆ.