ಕಾರ್ಪೊರೇಟ್ ಆಡಳಿತ ಮತ್ತು ಲೆಕ್ಕಪತ್ರ ವಂಚನೆ ಆರೋಪದಿಂದಾಗಿ ಗೌತಮ್ ಅದಾನಿ ಅವರ ಭವಿಷ್ಯ ಮೇಲೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ. ಇದರಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್ನ ಮುಖೇಶ್ ಅಂಬಾನಿ ದೇಶದ ನಂಬರ್ 1 ಶ್ರೀಮಂತ ಸ್ಥಾನ ಅಲಂಕರಿಸಿದ್ದಾರೆ. ನವದೆಹಲಿ: ಕಾರ್ಪೊರೇಟ್ ಆಡಳಿತ ಮತ್ತು ಲೆಕ್ಕಪತ್ರ ವಂಚನೆ ಆರೋಪದಿಂದಾಗಿ ಗೌತಮ್ ಅದಾನಿ ಅವರ ಭವಿಷ್ಯ ಮೇಲೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ.
ಇದರಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್ನ ಮುಖೇಶ್ ಅಂಬಾನಿ ದೇಶದ ನಂಬರ್ 1 ಶ್ರೀಮಂತ ಸ್ಥಾನ ಅಲಂಕರಿಸಿದ್ದಾರೆ. ಎಂ3ಎಂ ಹುರುನ್ ಗ್ಲೋಬಲ್ ರಿಚ್ ಲಿಸ್ಟ್ ಪ್ರಕಾರ, ಅದಾನಿ ಕಳೆದ ವರ್ಷದಿಂದ ಪ್ರತಿ ವಾರ 3,000 ಕೋಟಿ ಸಂಪತ್ತನ್ನು ಕಳೆದುಕೊಂಡಿದ್ದಾರೆ ಮತ್ತು ಅವರ ಒಟ್ಟಾರೆ ನಿವ್ವಳ ಮೌಲ್ಯವು ಅವರ ಗರಿಷ್ಠ ಸಂಪತ್ತಿನ ಮಟ್ಟಕ್ಕಿಂತ ಶೇ.60 ರಷ್ಟು ಕಡಿಮೆಯಾಗಿದೆ. ಮಾರ್ಚ್ ಮಧ್ಯದಲ್ಲಿ ಅವರ ಒಟ್ಟಾರೇ ಸಂಪತ್ತು 53 ಬಿಲಿಯನ್ ಡಾಲರ್ ನಷ್ಟಾಗಿದೆ. ಅಂಬಾನಿ ಅವರ ಸಂಪತ್ತಿನಲ್ಲಿಯೂ ಕುಸಿತವಾಗಿದೆ.
ಆದರೆ, ಅವರ ನಿವ್ವಳ ಮೌಲ್ಯವು ಶೇ. 20 ರಷ್ಟು ಕುಸಿತದೊಂದಿಗೆ 82 ಬಿಲಿಯನ್ ಡಾಲರ್ ನಷ್ಟಾಗಿದೆ. ಇದರಿಂದಾಗಿ ಅವರು ಅದಾನಿಯನ್ನು ಹಿಂದಿಕ್ಕಿ ದೇಶದ ಅತ್ಯಂತ ಶ್ರೀಮಂತ ಎನ್ನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಅದಾನಿ ಉದ್ಯಮ ಸಮೂಹ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಲೆಕ್ಕಪತ್ರ ವಂಚನೆ ಮಾಡಿದ್ದು, ಮಾರುಕಟ್ಟೆಯಲ್ಲಿ ಅಂಕಿಅಂಶ ತಿರುಚಲಾಗಿದೆ ಎಂದು ಅಮೆರಿಕದ ಕಿರು-ಮಾರಾಟಗಾರ ಹಿಂಡೆನ್ಬರ್ಗ್ ರಿಸರ್ಚ್ ಆರೋಪಿಸಿತ್ತು. ಇದರಿಂದಾಗಿ ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಕಂಪನಿಗಳ ಷೇರು ಬೆಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತವಾಗಿದೆ.