ಸೌದಿಯಲ್ಲಿ ಕರೆನ್ಸಿ ಬದಲಾಯಿಸಲು ಹೇಳಿದ್ದೇನೆ: ಜಮೀರ್‌ ಅಹ್ಮದ್‌ ಖಾನ್‌

ಸೌದಿಯಲ್ಲಿ ಕರೆನ್ಸಿ ಬದಲಾಯಿಸಲು ಹೇಳಿದ್ದೇನೆ: ಜಮೀರ್‌ ಅಹ್ಮದ್‌ ಖಾನ್‌

ಬೆಂಗಳೂರು: ಶಾಸಕ ಜಮೀರ್‌ ಅಹ್ಮದ್‌ ಖಾನ್‌ ವಿದೇಶಿ ಕರೆನ್ಸಿ ಹಂಚಿದ ವಿಚಾರವಾಗಿ ಜಮೀರ್‌ ಅಹ್ಮದ್‌ ಖಾನ್‌ ಪ್ರತಿಕ್ರಿಯೆ ನೀಡಿದ್ದಾರೆ. ಸೌದಿಗೆ ಹೋಗುತ್ತಿದ್ದ ಆಶಾ ಕಾರ್ಯಕರ್ತೆಯರಿಗೆ ಹಣ ನೀಡಿದ್ದೇನೆ ಎಂದು ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಸೌದಿಯಲ್ಲಿ ಕರೆನ್ಸಿ ಬದಲಾಯಿಸಲು ಹೇಳಿದ್ದೇನೆ ಎಂದು ಜಮೀರ್‌ ಅಹ್ಮದ್‌ ಖಾನ್‌ ಹೇಳಿದ್ದಾರೆ.
ರಾಜ್ಯದಲ್ಲಿ ಜನಾಭಿಪ್ರಾಯ ಕಾಂಗ್ರೆಸ್‌ ಪಕ್ಷದ ಪರವಾಗಿ ಇದೆ. ಸಿದ್ದರಾಮಯ್ಯ ಕೊಟ್ಟ ಯೋಜನೆಗಳನ್ನು ಜನರು ಸ್ಮರಿಸುತ್ತಿದ್ದಾರೆ. ಈ ಬಾರಿ 120 ಸ್ಥಾನ ಅಲ್ಲ, 150 ಸ್ಥಾನ ಬರುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲ್ಲ. ಬಿಜೆಪಿಗೆ ದುಡ್ಡು ಮಾಡುವ ಅವಸರ ಇದೆ ಎಂದು ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಎಂದಿದ್ದಾರೆ. ಒಂದು ಕ್ಷೇತ್ರದಲ್ಲಿ 1೦೦ ಕೋಟಿ ಖರ್ಚು ಮಾಡಿದ್ರು ಬಿಜೆಪಿ ಗೆಲ್ಲಲ್ಲ. ಬಸನಗೌಡ ಪಾಟೀಲ್‌ ಯತ್ನಾಳ್‌ ಮುಸ್ಲಿಮರು ವೋಟ್‌ ಹಾಕಲ್ಲ ಎಂದರು.