ಸುಧಾರಣ ಕಾಮಗಾರಿ: ನ. 8ರಿಂದ ಡಿ.12ರ ವರೆಗೆ ರೈಲುಗಳ ಸೇವೆಯಲ್ಲಿ ವ್ಯತ್ಯಯ

ಸುಧಾರಣ ಕಾಮಗಾರಿ: ನ. 8ರಿಂದ ಡಿ.12ರ ವರೆಗೆ ರೈಲುಗಳ ಸೇವೆಯಲ್ಲಿ ವ್ಯತ್ಯಯ

ಮಂಗಳೂರು : ಮುಂಬಯಿ ಲೋಕಮಾನ್ಯ ತಿಲಕ್‌ ಟರ್ಮಿನಸ್‌ನಲ್ಲಿ ಪಿಟ್‌ಲೈನ್ ನಂ.6ರಲ್ಲಿನ ಸುಧಾರಣ ಕಾಮಗಾರಿ ಹಿನ್ನೆಲೆಯಲ್ಲಿ ನ. 8ರಿಂದ ಡಿ.12ರ ವರೆಗೆ ಕೆಲವೊಂದು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ನಂ.16346 ತಿರುವನಂತಪುರ ಲೋಕಮಾನ್ಯ ತಿಲಕ್‌ ನೇತ್ರಾವತಿ ಎಕ್ಸ್‌ ಪ್ರಸ್‌ ರೈಲು ನ.9ರಿಂದ ಡಿ.11ರ ವರೆಗೆ ಪನ್ವೆಲ್‌ ವರೆಗೆ ಮಾತ್ರ ಸಂಚರಿಸಲಿದೆ.

ನಂ.12620 ಮಂಗಳೂರು ಸೆಂಟ್ರಲ್‌ ಮುಂಬಯಿ ಲೋಕಮಾನ್ಯ ತಿಲಕ್‌ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲು ನ. 9ರಿಂದ ಡಿ. 11ರ ವರೆಗೆ ಪನ್ವೆಲ್‌ ಜಂಕ್ಷನ್‌ ವರೆಗೆ ಸಂಚರಿಸಲಿದೆ. ನಂ.12619 ಮುಂಬಯಿ ಲೋಕಮಾನ್ಯ ತಿಲಕ್‌ ಮಂಗಳೂರು ಸೆಂಟ್ರಲ್‌ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ನ. 9ರಿಂದ ಡಿ. 12ರ ವರೆಗೆ ಲೋಕಮಾನ್ಯ ತಿಲಕ್‌ ಬದಲಿಗೆ ಪನ್ವೆಲ್‌ ನಿಲ್ದಾಣದಿಂದ ಹೊರಡಲಿದೆ.

ನಂ.16345 ಲೋಕಮಾನ್ಯ ತಿಲಕ್‌ ತಿರುವನಂತಪುರ ಸೆಂಟ್ರಲ್‌ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲು ನ.10ರಿಂದ ಡಿಸೆಂಬರ್‌ 13ರ ವರೆಗೆ ಲೋಕಮಾನ್ಯ ತಿಲಕ್‌ ಬದಲಿಗೆ ಪನ್ವೆಲ್‌ನಿಂದ ಹೊರಡಲಿರುವುದಾಗಿ ದಕ್ಷಿಣ ರೈಲ್ವೇ ಪ್ರಕಟನೆ ತಿಳಿಸಿದೆ.