ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ ; ಡಿಸೆಂಬರ್ ನೊಳಗೆ ಬಿಜೆಪಿಯ ಹಲವರು ಕಾಂಗ್ರೆಸ್ ಸೇರ್ಪಡೆ ; ಜಮೀರ್ ಸ್ಪೋಟಕ ಹೇಳಿಕೆ

ಧಾರವಾಡ : ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ ಯಾಗಲಿದ್ದು, ಡಿಸೆಂಬರ್ ವರೆಗೂ ಬಿಜೆಪಿಯ ಹಲವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಜಮೀರ್ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ ಯಾಗಲಿದೆ, ಬಿಜೆಪಿಯಲ್ಲಿ ಮಂದಿ ಗೊಂದಲದಲ್ಲಿದ್ದಾರೆ, ನವೆಂಬರ್‌ವರೆಗೂ ಕಾದು ನೋಡಿ, ಹಲವರು ಮತ್ತೆ ಕಾಂಗ್ರೆಸ್‍ಗೆ ಬರುತ್ತಾರೆ ಎಂದು ತಿಳಿಸಿದ್ದಾರೆ.ಹಲವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಬರಲಿದ್ದಾರೆ ಎಂದಿದ್ದಾರೆ, ಈ ಮೂಲಕ ಕಾಂಗ್ರೆಸ್ ಏನಾದರೂ ಆಪರೇಷನ್ ನಡೆಸಿ ಬಿಜೆಪಿಯನ್ನು ಗಾಳಕ್ಕೆ ಬೀಳಿಸಲಿದ್ಯಾ ಎಂಬ ಪ್ರಶ್ನೆ ಮೂಡಿದೆ.
ರಾಹುಲ್ ಗಾಂಧಿ ಪಾದಯಾತ್ರೆ ಬಗ್ಗೆ ಮಾತನಾಡಿದ ಜಮೀರ್ ದೇವರ ಆಶೀರ್ವಾದ ಪಾದಯಾತ್ರೆ ಯಶಸ್ವಿಯಾಗಿ ಸಾಗುತ್ತಿದೆ. ಸಿದ್ದು-ಡಿಕೆಶಿ ಮೊದಲಿನಿಂದಲೂ ಒಂದಾಗಿಯೇ ಇದ್ದಾರೆ, ಮಾಧ್ಯಮದವರೇ ಈ ರೀತಿಯಾಗಿ ಬಿಂಬಿಸಿದ್ದು, ಬಿಜೆಪಿ ಅವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಅವರ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.