ಸಿಬಿಐ ವಶದಲ್ಲಿದ್ದ ಬಾಂಬ್‌ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಸಿಬಿಐ ವಶದಲ್ಲಿದ್ದ ಬಾಂಬ್‌ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಲ್ಕತ್ತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಾಯಕ ಭದು ಶೇಖ್ ಮತ್ತು ಇತರರ ಸಾವಿಗೆ ಕಾರಣವಾದ ಬೊಗ್ಟುಯಿ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ ಲಾಲನ್ ಶೇಖ್ ಸೋಮವಾರ ಸಿಬಿಐ (CBI) ಕಸ್ಟಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಬಿರ್ಭೂಮ್ ಜಿಲ್ಲೆಯಲ್ಲಿ ಘಟನೆ ನಡೆದಿದೆ ಎಂದು ವರದಿ ಮಾಡಿದೆ.

ಮೂಲಗಳ ಪ್ರಕಾರ, ಲಾಲನ್ ರಾಮ್‌ಪುರಹತ್‌ನಲ್ಲಿ ತಾತ್ಕಾಲಿಕ ಶಿಬಿರದ ಸ್ನಾನಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆತನ ಸಾವಿನ ಕುರಿತು ಸಿಬಿಐ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.

ಡಿಸೆಂಬರ್ 4 ರಂದು ಆತನನ್ನು ಜಾರ್ಖಂಡ್‌ನಿಂದ ಬಂಧಿಸಿದ ನಂತರ ನ್ಯಾಯಾಲಯದಿಂದ ಆರು ದಿನಗಳ ಕಸ್ಟಡಿಗೆ ನೀಡಲಾಗಿದ್ದು, ಆರೋಪಿಯನ್ನು ಮಂಗಳವಾರ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿತ್ತು.