ಸಾವನ್ನಪ್ಪಿದ್ದ ಪ್ರೇಮಿಗಳಿಗಾಗಿ ಪ್ರತಿಮೆ ನಿರ್ಮಿಸಿ ಮದುವೆ ಮಾಡಿದ ಕುಟುಂಬ
ಗುಜರಾತ್ನ ತಪಿ ಜಿಲ್ಲೆಯಲ್ಲಿ ಇಬ್ಬರು ಪ್ರೇಮಿಗಳು ಆರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಆ ಜೋಡಿಯ ಕುಟುಂಬ ಸದಸ್ಯರು ಅಸುನೀಗಿರುವ ಪ್ರೇಮಿಗಳ ಪುತ್ಥಳಿ ಸ್ಥಾಪನೆ ಮಾಡಿ, ಅದಕ್ಕೆ ವಿವಾಹ ಮಾಡಿದ್ದಾರೆ. ಗಣೇಶ್ & ರಂಜನಾ ಎಂಬ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದರೆ, ಅವರಿಬ್ಬರ ಕುಟುಂಬದವರು ಮದುವೆಗೆ ಒಪ್ಪಿರಲಿಲ್ಲ. ಇದರಿಂದ ನೊಂದು ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಆದರೀಗ 2 ಕುಟುಂಬಗಳೂ ಅವರ ಪ್ರತಿಮೆಗಳನ್ನು ಸ್ಥಾಪಿಸಿ ಅವುಗಳಿಗೆ ಮದುವೆ ಮಾಡಿಸಿದ್ದಾರೆ.