ಸದ್ಗುರು ಸಚ್ಚಿದಾನಂದ ಸ್ವಾಮೀಜಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಬಂಡೆಪ್ಪ ಖಾಶಂಪುರ್

ಬೀದರ್ ನ ಖಾಶೆಂಪುರ್ ಪಿ ಗ್ರಾಮದಲ್ಲಿ ನಡೆದ ದತ್ತ ಮಹಾರಾಜರ ಅವತಾರ ಪುರುಷ ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿರವರ 6ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಪಲ್ಲಕ್ಕಿ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಪಲ್ಲಕ್ಕಿ ಮಹೋತ್ಸವಕ್ಕೆ ಶಾಸಕರಾದ ಬಂಡೆಪ್ಪ ಖಾಶೆಂಪುರ್ ಅವರು ಚಾಲನೆ ನೀಡಿದರು.
ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿ ದೇವಸ್ಥಾನಕ್ಕೆ ಇಂದು ಭೇಟಿ ನೀಡಿದ ಶಾಸಕರನ್ನು ಖಾಶೆಂಪುರ್ ಪಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ವಿವಿಧ ಕಲಾ ತಂಡದವರು ಅದ್ದೂರಿಯಾಗಿ ಸ್ವಾಗತಿಸಿದರು. ಇದೇ ವೇಳೆ ಶಾಸಕರು ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಇಟಗಾ ಮಠದ ಶರಣಯ್ಯ ಸ್ವಾಮಿ ಅರ್ಚಕರು, ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿ ದೇವಸ್ಥಾನದ ಅರ್ಚಕರಾದ ಶಿವಾನಂದ ಸ್ವಾಮಿ, ವಿಶ್ವನಾಥ ಬಾಲೆಬಾಯಿ, ಶರಣಪ್ಪ ಖಾಶೆಂಪುರ್, ಲಕ್ಷ್ಮಣ ಹೊಸಳ್ಳಿ, ಮಂಜುನಾಥ ಬಾಲೆಬಾಯಿ, ಸುನೀಲ್ ಗುಮಾಸ್ತಿ, ಶಾಂತು ಗುಮಾಸ್ತಿ, ಸಿದ್ದು ಖಾಶೆಂಪುರ್, ರಾಜಕುಮಾರ್ ಪೊಲೀಸ್ ಪಾಟೀಲ್, ಶಿವಪ್ಪ ಪೊಲೀಸ್ ಪಾಟೀಲ್, ಮಹೇಶ ಗುಮಾಸ್ತಿ, ಭಜರಂಗ ತಮಗೊಂಡ, ಮೋಹನ್ ಸಾಗರ್, ನರಸಪ್ಪ ಬಸಗೊಂಡ, ಚಂದ್ರಶೇಖರ್ ಪಾಟೀಲ್, ನವನಾಥ ಬಾಲೆಬಾಯಿ, ಕೃಷ್ಣ ಖಾಶೆಂಪುರ್, ಚಿದಾನಂದ ಖಾಶೆಂಪುರ್, ರವಿ ಬಾಲೆಬಾಯಿ, ಶಿವಕುಮಾರ್ ಬಾಲೆಬಾಯಿ, ಸುನೀಲ್ ಪಟ್ನೆ, ದೂಳಪ್ಪ ಪಟ್ನೆ, ಆನಂದ ತಮಗೊಂಡ, ಬಕ್ಕಪ್ಪ ಸುತಾರ್, ಬಾಬು ಗುಮಾಸ್ತಿ, ಸತೀಶ್ ಗುಮಾಸ್ತಿ, ಶಿವರಾಜ್ ಹಳ್ಳೊಳ್ಳಿ, ಬಸವರಾಜ ಬಂತಿಗಿ, ರಮೇಶ ಬಾಲೆಬಾಯಿ ಸೇರಿದಂತೆ ಅನೇಕರಿದ್ದರು.