ಸಣ್ಣ ಹೂಡಿಕೆಯೊಂದಿಗೆ ದೊಡ್ಡ ಯಶಸ್ಸು ಕಂಡ 'ಕಾಂತಾರ' ಹೂಡಿಕೆದಾರರಿಗೆ ಮಾದರಿ: ಪಿಯುಷ್ ಗೋಯಲ್

ಸಣ್ಣ ಹೂಡಿಕೆಯೊಂದಿಗೆ ದೊಡ್ಡ ಯಶಸ್ಸು ಕಂಡ 'ಕಾಂತಾರ' ಹೂಡಿಕೆದಾರರಿಗೆ ಮಾದರಿ: ಪಿಯುಷ್ ಗೋಯಲ್

ಬೆಂಗಳೂರು: ಕಡಿಮೆ ಹೂಡಿಕೆ ಮಾಡಿ ದೊಡ್ಡಮಟ್ಟದಲ್ಲಿ ಹಣ ಗಳಿಸಲು 'ಕಾಂತಾರ' ಚಿತ್ರ ಮಾದರಿಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಜಾಗತಿಕ ಹೂಡಿಕೆದಾರರ ಸಮಾವೇಶ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕ ಹೂಡಿಕೆಗೆ ಶ್ರೇಷ್ಠವಾದ ಸ್ಥಳವಾಗಿದೆ.

ಕನ್ನಡ ನಾಡಿನ ಸಂಸ್ಕೃತಿಯನ್ನು ಬಿಂಬಿಸಿದ ಕಡಿಮೆ ಬಜೆಟ್ ನ 'ಕಾಂತಾರ' ಸಿನಿಮಾ ದೊಡ್ಡ ಮಟ್ಟದಲ್ಲಿ ಹಣ ಗಳಿಸಿದೆ. ಇದೇ ರೀತಿ ಹೂಡಿಕೆ ಸಣ್ಣ ಪ್ರಮಾಣದಲ್ಲಿದ್ದರೂ, ಯಶಸ್ಸು ದೊಡ್ಡಮಟ್ಟದಲ್ಲಿ ಇರುವಂತೆ ಹೂಡಿಕೆದಾರರು ಶ್ರಮ ವಹಿಸಬೇಕು. ಕಡಿಮೆ ಹೂಡಿಕೆ ಮಾಡಿ ದೊಡ್ಡ ಮಟ್ಟದ ಯಶಸ್ಸು ಗಳಿಸಲು 'ಕಾಂತಾರ' ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.