ಶ್ರೀಕಿ ಹ್ಯಾಕರ್ ಅಂತ ಗೊತ್ತಿರಲಿಲ್ಲ : ಶಾಸಕ ಹ್ಯಾರಿಸ್ ಪುತ್ರ ಉಮರ್ ನಲಪಾಡ್ ಸ್ಪಷ್ಟನೆ

ಶ್ರೀಕಿ ಹ್ಯಾಕರ್ ಅಂತ ಗೊತ್ತಿರಲಿಲ್ಲ : ಶಾಸಕ ಹ್ಯಾರಿಸ್ ಪುತ್ರ ಉಮರ್ ನಲಪಾಡ್ ಸ್ಪಷ್ಟನೆ

ಬೆಂಗಳೂರು : ಶ್ರೀಕಿ, ಹ್ಯಾಕರ್ ಎಂದು ಗೊತ್ತಿರಲಿಲ್ಲ ಎಂದು ಶಾಸಕ ಹ್ಯಾರಿಸ್ ಪುತ್ರ ಉಮರ್ ನಲಪಾಡ್ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಟ್ ಕಾಯಿನ್ ವಿಚಾರದಲ್ಲಿ ಹ್ಯಾಕರ್ ಶ್ರೀಕಿ ಜೊತೆ ನಂಟು ಇರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಶ್ರೀಕಿ ಹ್ಯಾಕರ್ ಅಂತ ಗೊತ್ತಿರಲಿಲ್ಲ. ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಪರಿಚಯವಾಗಿತ್ತು ಅಷ್ಟೇ ಎಂದಿದ್ದಾರೆ. ಇನ್ನೂ ಅನಗತ್ಯವಾಗಿ ನನ್ನ ಹೆಸರು ತರಲಾಗುತ್ತಿದೆ. 2017 ರಲ್ಲಿ ಮಾಸ್ಟರ್ಸ್ ಸ್ಟಡಿಸ್ ಗೆ ಅಂತ ನಾನು ಲಂಡನ್ ಗೆ ಹೋಗಿದ್ದೆ. ಆ ಗ್ಯಾಪ್ ನಲ್ಲಿ ಏನಾಯ್ತು ಗೊತ್ತಿಲ್ಲ. ಆ ಬಳಿಕದಿಂದ ಟಚ್ ನಲ್ಲಿ ಇರಲಿಲ್ಲ ಎಂದಿದ್ದು, ನಮ್ಮಪ್ಪ ಕಾಂಗ್ರೇಸ್ ಲೀಡರ್ ಅಂತ ಇದೀಗ ಅದರಲ್ಲಿ ನನ್ನ ಹೆಸರು ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಹ್ಯಾರಿಸ್ ಪುತ್ರ ಉಮರ್ ನಲಪಾಡ್ ಸ್ಪಷ್ಟನೆ ನೀಡಿದ್ದಾರೆ. ಬಿಟ್ ಕಾಯಿನ್ ವಿಚಾರವಾಗಿ ಪೊಲೀಸರು ಕೂಡ ವಿಚಾರಣೆ ಕರೆದಿಲ್ಲ, ಮಾಹಿತಿನೂ ಕೇಳಿಲ್ಲ. ನಾನೇನು ತಪ್ಪು ಮಾಡಿಲ್ಲ, ವಿಚಾರಣೆಗೆ ಕರೆದರೆ ಹೋಗುತ್ತಿನಿ ಎಂದು ಮಾಹಿತಿ ನೀಡಿದ್ದಾರೆ.