ಶಿವಸೇನಾ ಸಂಸದೀಯ ನಾಯಕ ಸ್ಥಾನದಿಂದ ಸಂಜಯ್ ರಾವತ್ ರನ್ನು ವಜಾಗೊಳಿಸಿದ ಶಿಂಧೆ

ಶಿವಸೇನಾ ಸಂಸದೀಯ ನಾಯಕ ಸ್ಥಾನದಿಂದ ಸಂಜಯ್ ರಾವತ್ ರನ್ನು ವಜಾಗೊಳಿಸಿದ ಶಿಂಧೆ
ಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ತನ್ನ ಸಂಸದೀಯ ಪಕ್ಷದ ನಾಯಕ ಸಂಜಯ್ ರಾವತ್ ಅವರನ್ನು ವಜಾಗೊಳಿಸಿದೆ ಮತ್ತು ಸಂಸದ ಗಜಾನನ್ ಕೀರ್ತಿಕರ್ ಅವರನ್ನು ನೂತನ ಸಂಸದೀಯ ನಾಯಕರನ್ನಾಗಿ... ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ತನ್ನ ಸಂಸದೀಯ ಪಕ್ಷದ ನಾಯಕ ಸಂಜಯ್ ರಾವತ್ ಅವರನ್ನು ವಜಾಗೊಳಿಸಿದೆ ಮತ್ತು ಸಂಸದ ಗಜಾನನ್ ಕೀರ್ತಿಕರ್ ಅವರನ್ನು ನೂತನ ಸಂಸದೀಯ ನಾಯಕರನ್ನಾಗಿ ನೇಮಕ ಮಾಡಿದೆ.
ಶಿವಸೇನೆಯ ಮುಖ್ಯ ನಾಯಕರಾಗಿರುವ ಶಿಂಧೆ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದು, ಕೀರ್ತಿಕರ್ ಅವರನ್ನು ಶಿವಸೇನೆಯ ಸಂಸದೀಯ ಪಕ್ಷದ ನಾಯಕರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ. ಸಂಸತ್ ಭವನದ ಮೂರನೇ ಮಹಡಿಯಲ್ಲಿರುವ ಸಂಸದೀಯ ಪಕ್ಷದ ಕಚೇರಿಯಲ್ಲಿ ಶಿವಸೇನೆ ಮುಖಂಡರು ಗುರುವಾರ ಸಂಸದೀಯ ಪಕ್ಷದ ನೂತನ ನಾಯಕ ಕೀರ್ತಿಕರ್ ಅವರನ್ನು ಸನ್ಮಾನಿಸಿದರು. ಇದನ್ನು ಓದಿ:ಲೋಕಸಭೆಯಲ್ಲಿ ಶಿವಸೇನೆ 18 ಸದಸ್ಯರನ್ನು ಹೊಂದಿದ್ದು, ನಾಲ್ವರು ಪಕ್ಷದ ನಿಯಂತ್ರಣವನ್ನು ಕಳೆದುಕೊಂಡ ಉದ್ಧವ್ ಠಾಕ್ರೆಯೊಂದಿಗೆ ತಮ್ಮ ನಿಷ್ಠೆಯನ್ನು ಹೊಂದಿದ್ದಾರೆ. ಠಾಕ್ರೆ ಮಹಾರಾಷ್ಟ್ರದಲ್ಲಿ ತಮ್ಮ ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್ ಮತ್ತು ಎನ್ಸಿಪಿ ಜೊತೆ ಮೈತ್ರಿ ಮಾಡಿಕೊಂಡು ಪಕ್ಷದ ಮೂಲ ಆದರ್ಶಗಳೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಶಿಂಧೆ ಕಳೆದ ವರ್ಷ ಶಿವಸೇನೆಯನ್ನು ವಿಭಜಿಸಿದ್ದರು.