ಶಿಕ್ಷಣ ಸಂಸ್ಥೆಗಳಿಂದ ಹೆಚ್ಚಿನ ಶುಲ್ಕ ತಡೆಯುವಂತೆ ಎಬಿವಿಪಿ ಆಗ್ರಹ

ಧಾರವಾಡ : ಎಬಿವಿಪಿ ಧಾರವಾಡ ಘಟಕದವರು ಸರಕಾರಿ ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಹೆಚ್ಚಿನ ಶುಲ್ಕ ತಡೆಯುವಂತೆ ಆಗ್ರಹಿಸಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಧಾರವಾಡಲ್ಲಿ ಡೊನೇಶನ್ ಹಾಗೂ 'ಇಂಟಿಗ್ರೆಟೆಡ್ ಕೋಚಿಂಗ್ ಹಾವಳಿ ಹಾಗೂ ಸರಕಾರಿ ಅನುದಾನಿತ,ಮತ್ತು ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಹೆಚ್ಚಿನ ಶುಲ್ಕ ತಡೆಯುವಂತೆ ಆಗ್ರಹಿಸಿ, ಎಬಿವಿಪಿ ಸಂಘಟನೆಕಾರರು ಪ್ರತಿಭಟನೆ ನಡೆಸಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ನೀಡಿದರು.
ಈ ಸಂದಭ೯ದಲ್ಲಿ ಜಿಲ್ಲಾಸಂಚಾಲಕ ಅರುಣಅಮರಗೋಳ, ವಿದ್ಯಾನಾಂದ ಸ್ಥಾವರಮಠ,ಸಚೀನ ಹೀರೆಮಠ,ಶಶಾಂಕ ಮಟ್ಟಿ ಕಾಶಿನಾಥ ಮಣುರೆ,ಪ್ರದಿಪ ,ಮಹಾಂತೇಶ ಭಾಗಿಯಾಗಿದ್ದರು.