86ನೇ ಕನ್ನಡ ಸಾಹಿತ್ಯ ಸಮ್ಮೇಳನ ತಟ್ಟಿದ ಎಫೆಕ್ಟ್‌ : ವಿಷಪೂರಿತ ಆಹಾರ ತಿಂದ 11 ಕುರಿಗಳು ಸಾವು

86ನೇ ಕನ್ನಡ ಸಾಹಿತ್ಯ ಸಮ್ಮೇಳನ ತಟ್ಟಿದ ಎಫೆಕ್ಟ್‌ : ವಿಷಪೂರಿತ ಆಹಾರ ತಿಂದ 11 ಕುರಿಗಳು ಸಾವು

ಹಾವೇರಿ : ಜಿಲ್ಲೆಯ ಅಜ್ಜಯ್ಯ ದೇವಸ್ಥಾನದ ಬಳಿ ಜ. 6,7, 8ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉಳಿದ ಆಹಾರ ಎಸೆದಿದ್ದು. ವಿಷಪೂರಿತ ಆಹಾರ ಸೇವಿಸಿದ 11 ಕುರಿಗಳು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.

ಸಾಹಿತ್ಯ ಸಮ್ಮೇಳನಕ್ಕೆ ಮಾಡಲಾಗಿದ್ದ ರೊಟ್ಟಿ, ಅನ್ನ ಹಾಗೂ ಚಪಾತಿ ಉಳಿದಿದ್ದು ಅದನ್ನೂ ಅಲ್ಲೇ ಎಸೆದು ಹೋಗಲಾಗಿತ್ತು. ಕೊಳೆತು ನಾರುತ್ತಿದ್ದ ಆಹಾರವನ್ನುಕುರಿಗಳು ತಿಂದಿದ್ದಾವೆ. ಕುರಿಗಳಿಂದ ಜೀವನ ಸಾಗಿಸುತ್ತಿದ್ದ ಅಜ್ಜಿಯೊಬ್ಬರ 11 ಕುರಿಗಳು ಸಾವನ್ನಪ್ಪಿದೆ. ಇದಕ್ಕೆ ಕೂಡಲೇ ಸೂಕ್ತ ಪರಿಹಾರ ನೀಡುವಂತೆ ಕುರಿಗಾಹಿಗಳು ಅಳಲು ತೋಡಿಕೊಂಡಿದ್ದಾರೆ.

ಈ ಘಟನೆ ಸಂಬಂದ ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಲಕ್ಷಾಂತರ ರೂಪಾಯಿಯ ಕುರಿಗಳನ್ನುಸಾಕುತ್ತಿದ್ದ ಅಜ್ಜಿಯೊಬ್ಬರು ಕಣ್ಣಿರು ಹಾಕುತ್ತಿದ್ದಾರೆ. 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದ ಅಧಿಕಾರಿಗಳ ಬೇಜಾವ್ದಾರಿಯೇ ಕುರಿಗಳ ಸಾವಿಗೆ ಕಾರಣವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.