ʼಹಾಗಲಕಾಯಿʼ ಕಹಿ ನಿವಾರಿಸುವುದಕ್ಕೆ ಇಲ್ಲಿದೆ ಟಿಪ್ಸ್

ʼಹಾಗಲಕಾಯಿʼ ಕಹಿ ನಿವಾರಿಸುವುದಕ್ಕೆ ಇಲ್ಲಿದೆ ಟಿಪ್ಸ್

ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹದವರಿಗೆ ಇದು ತುಂಬಾನೇ ಉತ್ತಮವಾದ ತರಕಾರಿಯಾಗಿದೆ ಎನ್ನಬಹುದು.

ಆದರೆ ಇದರಲ್ಲಿರುವ ಕಹಿಯ ಕಾರಣದಿಂದ ಕೆಲವರು ತಿನ್ನುವುದಕ್ಕೆ ಇಷ್ಟಪಡುವುದಿಲ್ಲ. ಮಕ್ಕಳಂತೂ ಹಾಗಲಕಾಯಿ ನೋಡಿದರೆ ಮುಖ ಕಿವುಚುತ್ತಾರೆ.

ಹಾಗಲಕಾಯಿಯಲ್ಲಿರುವ ಅತಿಯಾದ ಕಹಿ ಅಂಶವನ್ನು ತೆಗೆಯುವ ವಿಧಾನ ಇಲ್ಲಿದೆ ನೋಡಿ.

ಹಾಗಲಕಾಯಿಯನ್ನು ತೆಳುವಾಗಿ ಕತ್ತರಿಸಿಕೊಳ್ಳಿ ನಂತರ ಅದರ ಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ 30 ನಿಮಿಷಗಳ ಕಾಲ ಇದನ್ನು ಹಾಗೆಯೇ ಬಿಟ್ಟು ಬಿಡಿ. ಸ್ವಲ್ಪ ಹೊತ್ತಿನ ನಂತರ ಹಾಗಲಕಾಯಿ ನೀರು ಬಿಟ್ಟುಕೊಳ್ಳುವುದನ್ನು ಕಾಣಬಹುದು. ಆಗ ಹಾಗಲಕಾಯಿಯನ್ನು ಹಿಂಡಿ ಬೇರೆ ಪಾತ್ರೆಗೆ ತೆಗೆದುಕೊಳ್ಳಿ. ಕಹಿಯ ಅಂಶವಿರುವ ನೀರನ್ನು ಹೊರಗೆ ಚೆಲ್ಲಿ.

ನಂತರ ಹಾಗಲಕಾಯಿಯನ್ನು ತೊಳೆದುಕೊಂಡು ಅದರಲ್ಲಿರುವ ನೀರಿನ ಅಂಶವನ್ನೆಲ್ಲಾ ಹಿಂಡಿ ಒಂದು ಪ್ಲೇಟಿನ ಮೇಲೆ ಇದನ್ನು ಹರವಿಕೊಳ್ಳಿ. 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನೀರಿನ ಅಂಶವೆಲ್ಲಾ ಸ್ವಲ್ಪ ಒಣಗಿದ ಮೇಲೆ ಇದರಿಂದ ನಿಮ್ಮಿಷ್ಟದ ಅಡುಗೆ ಮಾಡಿಕೊಂಡು ಸವಿಯಿರಿ.