ಲೈಂಗಿಕ ದೌರ್ಜನ್ಯವೆಸಗಿ ಅಪ್ರಾಪ್ತನನ್ನು ಕೊಲೆಗೈದ ಆರೋಪಿಗೆ ಗಲ್ಲು ವಿಧಿಸಿದ ಕೋರ್ಟ್

ಬೆಂಗಳೂರು: ಅಪ್ರಾಪ್ತ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿ, ಆತನನ್ನ ಕೊಲೆಗೈದಿದ್ದ ಆರೋಪಿಗೆ ಇಂದು ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ, ಐತಿಹಾಸಿಕ ತೀರ್ಪು ನೀಡಿದೆ. 2015ರಲ್ಲಿ ರಾಜಗೋಪಾಲನಗರದ ಠಾಣೆ ವ್ಯಾಪ್ತಿಯಲ್ಲಿ, ಹುಲ್ಲಜ್ಜ ಎಂಬಾತ ಅಪ್ರಾಪ್ತ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ನಡೆಸಿ, ಹತ್ಯೆಗೈದಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ 1ನೇ ನ್ಯಾಯಾಲ, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ, ಸಂತ್ರಸ್ತ ಕುಟುಂಬಕ್ಕೆ 5ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ