ರೈತರಿಗೆ ಉಚಿತ ಡೀಸೆಲ್ ನೀಡುವ `ರೈತ ಶಕ್ತಿ' ಯೋಜನೆಗೆ ಇಂದು ಸಿಎಂ ಬೊಮ್ಮಾಯಿ ಚಾಲನೆ

ಧಾರವಾಡ : ಇಡೀ ದೇಶದಲ್ಲಿಯೇ ಪ್ರಥಮ ಬಾರಿಗೆ ರೈತರಿಗೆ ಉಚಿತ ಡಿಸೈಲ್, ಇಂಧನ ವಿತರಿಸುವ ರೈತ ಶಕ್ತಿ ಯೋಜನೆಗೆ ಧಾರವಾಡದಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.
ರಾಜ್ಯ ಸರ್ಕಾರವು ರೈತಶಕ್ತಿ ಎಂಬ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಈ ಯೋಜನೆಯಡಿ ರೈತರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಗರಿಷ್ಟ 5 ಎಕರೆಯವರೆಗೆ ಫ್ರೂಟ್ಸ್ ಪೋರ್ಟಲ್‍ನಲ್ಲ್ಲಿ(FRUITS)ನೋಂದಣಿ ಗುರುತಿನ (FID) ಸಂಖ್ಯೆಯಲ್ಲಿ ನಮೂದಿಸಿರುವ ಹಿಡುವಳಿಯ ಆಧಾರದ ಮೇಲೆ ರೈತರಿಗೆ ಡೀಸೆಲ್ ಸಹಾಯಧನ ವರ್ಗಾವಣೆಯಾಗಲಿದೆ.
ಒಂದು ಎಕರೆವರೆಗೆ (<= 1.00ಎಕರೆ)ರೂ.250/-, ಎರಡು ಎಕರೆವರೆಗೆ (>1.00ಎಕರೆ<=2ಎಕರೆ) ರೂ.500/-, ಮೂರು ಎಕರೆವರೆಗೆ (>2.00ಎಕರೆ<=3ಎಕರೆ) ರೂ.750/-, ನಾಲ್ಕು ಎಕರೆವರೆಗೆ (>3.00ಎಕರೆ<=4ಎಕರೆ) ರೂ.1000/-, ನಾಲ್ಕು ಎಕರೆ ಮೇಲ್ಪಟ್ಟು (>4.00ಎಕರೆ ) ರೂ.1250/- ಸಹಾಯಧನ ಸಿಗಲಿದೆ.