ರಾಜ್ಯದ ಮಂದಿಗೆ ಮತ್ತೆ ವಿದ್ಯುತ್ ಶಾಕ್
ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆ ಮೂಲಕ ಗ್ರಾಹಕರಿಗೆ ಶಾಕ್ ನೀಡಲು ವಿದ್ಯುತ್ ಸರಬರಾಜು ಕಂಪೆನಿಗಳು ಮುಂದಾಗಿದ್ದು, ಯೂನಿಟ್‌ಗೆ 1.20-1.40 ರೂ. ಹೆಚ್ಚಳಕ್ಕೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಪ್ರಸ್ತಾವನೆ ಸಲ್ಲಿಸಿವೆ. ಖರೀದಿ, ಸೋರಿಕೆ ಸೇರಿ ವಿವಿಧ ವೆಚ್ಚ ಆಧರಿಸಿ ದರ ಹೆಚ್ಚಳಕ್ಕೆ ಮನವಿ ಮಾಡಿವೆ. ಇದರೊಂದಿಗೆ KPTCL ಸೇರಿ ಎಸ್ಕಾಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಪಿಂಚಣಿ & ಈ ನೌಕರರ ವೇತನ ಪರಿಷ್ಕರಣೆಯ ಬಾಬ್ತು ಕೂಡ ಪ್ರಸ್ತಾವನೆಯಲ್ಲಿ ಸೇರ್ಪಡೆಯಾಗಿದೆ.