ಮೊದಲ ಬಾರಿಗೆ ಖಳನಾಯಕಿಯಾಗಿ ಮೋಡಿ ಮಾಡುತ್ತಿರೋ ನಟಿ ಸುಕೃತಾ ನಾಗ್

ಮೊದಲ ಬಾರಿಗೆ ಖಳನಾಯಕಿಯಾಗಿ ಮೋಡಿ ಮಾಡುತ್ತಿರೋ ನಟಿ ಸುಕೃತಾ ನಾಗ್

ಸುಕೃತಾ ನಾಗ್... ಕಿರುತೆರೆ ವೀಕ್ಷಕರಿಗಂತೂ ತೀರಾ ಪರಿಚಿತವಿರುವ ಮುಖ, ಆದರೆ ಹೆಸರಲ್ಲ! ಯಾಕೆಂದರೆ ಕಿರುತೆರೆ ಎಂಬ ಪುಟ್ಟ ಲೋಕದಲ್ಲಿ ಸುಕೃತಾ ನಾಗ್ ಅಂಜಲಿ ಎಂದೇ ಫೇಮಸ್ಸು! ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿಯಲ್ಲಿ ನಾಯಕ ಸಿದ್ಧಾರ್ಥನ ತಂಗಿ ಅಂಜಲಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಸುಕೃತಾ ನಾಗ್ ಬರೋಬ್ಬರಿ ಏಳು ವರ್ಷಗಳ ಕಾಲ ಆ ಪಾತ್ರದ ಮೂಲಕ ವೀಕ್ಷಕರ ಗಮನ ಸೆಳೆದಿದ್ದರು.

ಅಗ್ನಿಸಾಕ್ಷಿ' ಧಾರಾವಾಹಿಯ ನಂತರ ಕೊಂಚ ಸಮಯ ನಟನೆಯಿಂದ ದೂರವಿದ್ದ ಸುಕೃತಾ ನಾಗ್ ತದ ನಂತರ ಶ್ವೇತಾ ಆಗಿ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷಣ' ಧಾರಾವಾಹಿಯಲ್ಲಿ ಖಳನಾಯಕಿ ಶ್ವೇತಾ ಆಗಿ ನಟಿಸುತ್ತಿರುವ ಸುಕೃತಾ ನಾಗ್ ಇದೇ ಮೊದಲ ಬಾರಿಗೆ ವಿಲನ್ ಆಗಿ ಕಿರುಪರದೆಯಲ್ಲಿ ಅಬ್ಬರಿಸುತ್ತಿದ್ದಾರೆ.