ಮುಳುವಾಯ್ತು ಅವಹೇಳನಾಕಾರಿ ಹೇಳಿಕೆ; ಕೋರ್ಟ್ ಕಟಕಟೆಯಲ್ಲಿ ಸಚಿವ ಸುಧಾಕರ್

ಸಚಿವ ಸುಧಾಕರ್ ನೀಡಿದ್ದ ಹೇಳಿಕೆ ಅವರಿಗೆ ಸಂಕಷ್ಟ ತಂದೊಡ್ಡಿದೆ. ಅವರನ್ನು ಕೋರ್ಟ್ ಕಟಕಟೆಯಲ್ಲಿ ನಿಲ್ಲುಂತೆ ಮಾಡಿದೆ. ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಿದ್ದನ್ನು ಪ್ರಶ್ನಿಸಿ ಶಾಶ್ವತ ನೀರಾವರಿ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಚಿವರು ಆಂಜನೇಯ ರೆಡ್ಡಿ ವಿರುದ್ದ ಗಂಭೀರ ಆರೋಪ ಮಾಡಿ ನಿಂದಿಸಿದ್ದರು. ಇದನ್ನು ಪ್ರಶ್ನಿಸಿ ಸುಧಾಕರ್ ವಿರುದ್ದ ಆಂಜನೇಯ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.