ಮಾರ್ಚ್ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?

ವರ್ಷದ ಎರಡು ತಿಂಗಳುಗಳು ಈಗಾಗಲೇ ಕಳೆದಿದೆ. ಈಗ ಫೆಬ್ರವರಿ ತಿಂಗಳು ಕೊನೆಯಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಹೊಸ ತಿಂಗಳ ಸ್ವಾಗತಕ್ಕೆ ನಾವು ಸಿದ್ಧವಾಗಿದ್ದೇವೆ. ಅಂದ ಹಾಗೆ ಈ ತಿಂಗಳು 28 ದಿನಗಳು ಮಾತ್ರ ಇದೆ. ಈ ತಿಂಗಳಲ್ಲಿ ಎಲ್ಪಿಜಿ ದರ ಸೇರಿದಂತೆ ಹಲವಾರು ಹಣಕಾಸು ಸಂಬಂಧಿತ ಬದಲಾವಣೆಗಳು ಆಗಲಿದೆ.
ಪ್ರಮುಖವಾಗಿ ಹೊಸ ತಿಂಗಳ ಮೊದಲ ದಿನವೇ ಎಲ್ಪಿಜಿ ಸಂಸ್ಥೆಗಳು ಎಲ್ಪಿಜಿ ದರ ಪರಿಷ್ಕರಣೆ ಮಾಡಲಿದೆ. ಬ್ಯಾಂಕಿಂಗ್, ಹಣಕಾಸು ಮತ್ತು ಇತರೆ ಸೆಕ್ಟರ್ಗಳಲ್ಲಿ ಮಾರ್ಚ್ 1ರಿಂದ ಹಲವಾರು ಬದಲಾವಣೆಗಳು ಆಗಲಿದೆ. ಈ ಹೊಸ ಬದಲಾವಣೆಗಳು ನಮ್ಮ ದಿನನಿತ್ಯದ ವಹಿವಾಟಿನ ಮೇಲೆ ಪ್ರಭಾವ ಬೀರಲಿದೆ. ಎಲ್ಪಿಜಿ ದರ ಏರಿಕೆ ಮಾತ್ರವಲ್ಲದೆ ಸಾಲವು ದುಬಾರಿಯಾಗಲಿದೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ