ಮಾಜಿ ಸಿಎಂ ಸಿದ್ದುಗೆ ಬಿಗ್‌ ಶಾಕ್: ಕೋಲಾರ ಕಾಂಗ್ರೆಸ್‌ನಲ್ಲಿ ಬಹಿರಂಗವಾಗಿ ಅಸಮಾಧನ ಹೊರ ಹಾಕುತ್ತಿರುವ ನಾಯಕರು

ಮಾಜಿ ಸಿಎಂ ಸಿದ್ದುಗೆ ಬಿಗ್‌ ಶಾಕ್: ಕೋಲಾರ ಕಾಂಗ್ರೆಸ್‌ನಲ್ಲಿ ಬಹಿರಂಗವಾಗಿ ಅಸಮಾಧನ ಹೊರ ಹಾಕುತ್ತಿರುವ ನಾಯಕರು

ಬೆಂಗಳೂರು: ಸದ್ಯ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧೆ ಮಾಡಲಾಗಿದ್ದಾರೆ ಎನ್ನಲಾಗುತ್ತಿದೆ. ಕಳೆದ ವಾರ ಒಂದು ರೌಂಡ್ಸ್‌ ಕೋಲಾರವನ್ನು ಹಾಕಿ ಬಂದಿದ್ದಾರೆ ಸಿದ್ದರಾಮಯ್ಯ ಅವರು ಹಾಕಿ ಬಂದಿದ್ದಾರೆ. ಇದಲ್ಲದೇ ಮೂರರಿಂದ ನಾಲ್ಕು ಸರ್ವೆಯನ್ನು ನಡೆಸಿದ್ದು, ಸರ್ವೆಯಲ್ಲಿ ಸಿದ್ದರಾಮಯ್ಯ ಅವರ ಪರ ಫಿಫ್ಟಿ ಫಿಫ್ಟಿ ಒಲವು ಇದೇ ಎನ್ನಲಾಗುತ್ತಿದೆ.

ಈ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೋಲಾರ ಕಾಂಗ್ರೆಸ್‌ ನಲ್ಲೇ ವಿರೋಧ ವ್ಯಕ್ತವಾಗುತ್ತಿದ್ದು, ಸಿದ್ದರಾಮಯ್ಯ ಅವರಿಗೆ ದೊಡ್ಡ ತಲೆನೋವಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಂಸದ ಕೆ.ಹೆಚ್‌ ಮುನಿಯಪ್ಪ ಅವರ ವಿರೋಧವಾಗಿ ಹಾಲಿ ಕಾಂಗ್ರೆಸ್ ಶಾಸಕ ರಮೇಶ್‌ ಕುಮಾರ್‌ ಕೆಲಸ ಮಾಡಿದ್ದಾರೆ ಅಂತ ಬಹಿರಂಗವಾಗಿಯೇ ಮುನಿಯಪ್ಪ ಅವರು ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಇದಲ್ಲದೇ ಕೊತ್ತನೂರು ಮಂಜು ಪಾರ್ಟಿಗೆ ಸೇರಿಸಿಕೊಳ್ಳುವ ಹೊತ್ತಿನಲ್ಲಿ ನಮ್ಮನ್ನು ಒಂದು ಮಾತು ಕೂಡ ಕೇಳಲಿಲ್ಲ ಅಂತ ಮುನಿಯಪ್ಪ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ದೊಡ್ಡ ತಲೆನೋವಾಗಿದೆ. ಇದಲ್ಲದೇ ತಮ್ಮ ಸೋಲಿಗೆ ಸಿದ್ದರಾಮಯ್ಯ ಅವರೇ ನನ್ನ ಸೋಲಿಗೆ ಕಾರಣ ಅನ್ನೋದು ಮುನಿಯಪ್ಪರವರ ಸಿಟ್ಟಿಗೆ ಕಾರಣವಾಗಿದೆ.