ಮಸಗಲಿಯಲ್ಲಿ ಕಾಫಿ ಗಿಡ ನಾಶ ಅರಣ್ಯ ಇಲಾಖೆ ಡಿ.ಸಿ.ಗೆ ದೂರು

ಮಸಗಲಿಯಲ್ಲಿ ಕಾಫಿ ಗಿಡ ನಾಶ  ಅರಣ್ಯ ಇಲಾಖೆ  ಡಿ.ಸಿ.ಗೆ ದೂರು
ಚಿಕ್ಕಮಗಳೂರು: ಮೀಸಲು ಅರಣ್ಯ ಪ್ರದೇಶದಲ್ಲಿ ಬೆಳೆದ ಆರೋಪದ ಮೇಲೆ ಸುಮಾರು ನಾಲ್ಕು ಎಕರೆ ಪ್ರದೇಶದ ಕಾಫಿ ಗಿಡಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಡಿದು ಹಾಕಿದೆ .
ಸುಪ್ರೀಂಕೋರ್ಟಿನ ಆದೇಶದ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಬೆಳೆದು ನಿಂತಿರುವ ಫಲಭರಿತ ಕಾಫಿ ಗಿಡಗಳನ್ನು ಅರಣ್ಯ ಸಿಬ್ಬಂದಿ ಕಡಿದು ಹಾಕಿದ್ದು , ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಕಳೆದ ವರ್ಷವೂ 22 ಕುಟುಂಬಗಳ ಫಸಲಿಗೆ ಬಂದ ಕಾಫಿ ತೋಟವನ್ನು ಕಡಿದು ನಾಶ ಮಾಡಿದ್ದು , ಈಗ ಮತ್ತೆ ನಾಲ್ಕು ಕುಟುಂಬಗಳ ಕಾಫಿ ಗಿಡಗಳನ್ನು ನಾಶ ಮಾಡಿದ್ದಾರೆ ಎಂದು ನಿರಾಶ್ರಿತ ರೈತ ಹೋರಾಟ ಸಮಿತಿ ಅಧ್ಯಕ್ಷ ಎಂ .ಎಲ್. ಬಸವರಾಜು ಆರೋಪಿಸಿದ್ದಾರೆ .
ಕಡಿದ ಗಿಡಗಳನ್ನು ವಾಹನದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತಂದು ಸಾಂಕೇತಿಕ ಪ್ರತಿಭಟನೆ ನಡೆಸಿದ ಸ್ಥಳೀಯರು ಬೆಳೆ ಕಟಾವು ಮಾಡುವವರರೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ .
211ಕುಟುಂಬಗಳಲ್ಲಿ ಕೇವಲ 76 ಕುಟುಂಬಗಳನ್ನು ಗುರುತು ಮಾಡಿ ಇನ್ನುಳಿದ 135 ಕುಟುಂಬಗಳಿಗೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ .
ಸರ್ಕಾರ 30 ಕೋಟಿ ರೂ ಹಣ ಬಿಡುಗಡೆ ಮಾಡಿದ್ದು , ಜಿಲ್ಲಾಧಿಕಾರಿಗಳು ಈ ಹಣವನ್ನು ವೈಜ್ಞಾನಿಕವಾಗಿ ಮನೆ ಹಾಗೂ ತೋಟ ಕಳೆದುಕೊಳ್ಳುವವರಿಗೆ ವಿತರಣೆ ಮಾಡುವಂತೆ ಒತ್ತಾಯಿಸಿದ್ದಾರೆ .