ಭಾರತದ ನಕ್ಷೆಯನ್ನು ತಪ್ಪಾಗಿ ಬಿಂಬಿಸಿದ ವಾಟ್ಸ್ಆಯಪ್ ಕೇಂದ್ರದ ಖಡಕ್ ಎಚ್ಚರಿಕೆ

ನವದೆಹಲಿ: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸುವ ಗ್ರಾಫಿಕ್ ಚಿತ್ರವನ್ನು ಪೋಸ್ಟ್ ಮಾಡಿದ್ದಕ್ಕಾಗಿ ವಿವಾದಕ್ಕೆ ಸಿಲುಕಿದೆ.ಈ ಬಗ್ಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.
'ಪ್ರಿಯ ವಾಟ್ಸಾಪ್.. ಭಾರತದ ಭೂಪಟದಲ್ಲಿ ಉದ್ಭವಿಸಿರುವ ತಪ್ಪನ್ನು ತಕ್ಷಣವೇ ಸರಿಪಡಿಸುವಂತೆ ನಾವು ನಿಮ್ಮನ್ನು ವಿನಂತಿಸುತ್ತೇವೆ. ಭಾರತದಲ್ಲಿ ವ್ಯವಹಾರ ನಡೆಸುವ ಎಲ್ಲಾ ಕಂಪನಿಗಳು ಮತ್ತು ವ್ಯವಹಾರವನ್ನು ಮುಂದುವರಿಸಲು ಬಯಸುವ ಸಂಸ್ಥೆಗಳು ಸರಿಯಾದ ನಕ್ಷೆಯನ್ನು ಬಳಸಬೇಕು. ಕೇಂದ್ರ ಸಚಿವರು ಟ್ವಿಟ್ಟರ್ ನಲ್ಲಿ ವಾಟ್ಸಾಪ್ ಪೋಸ್ಟ್ ಅನ್ನು ರೀಟ್ವೀಟ್ ಮಾಡಿದ್ದಾರೆ. ಅವರು ವಾಟ್ಸಾಪ್ನ ಮಾತೃಸಂಸ್ಥೆ 'ಮೆಟಾ' ಅನ್ನು ಸಹ ಟ್ಯಾಗ್ ಮಾಡಿದ್ದಾರೆ. ಹೊಸ ವರ್ಷದ ಮುನ್ನಾದಿನದಂದು ವಾಟ್ಸಾಪ್ ಈ ಗ್ರಾಫಿಕ್ ಚಿತ್ರವನ್ನು ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ, ಸಚಿವರು ತಕ್ಷಣವೇ ದೋಷವನ್ನು ಗಮನಿಸಿ ತಕ್ಷಣ ಮೆಟಾಗೆ ದೂರು ನೀಡಿದರು. ತಪ್ಪನ್ನು ತಿದ್ದಿಕೊಳ್ಳದಿರುವುದರ ಪರಿಣಾಮಗಳ ಬಗ್ಗೆ ಅವರು ತಾತ್ವಿಕವಾಗಿ ಎಚ್ಚರಿಕೆ ನೀಡಿದರು.