ಭಾರತದ ಆ ಒಂದು ಹುಳುಕನ್ನು ಒಪ್ಪಲು ನಾಯಕ ರೋಹಿತ್ ಶರ್ಮಾ ಸಿದ್ಧವಿಲ್ಲ!

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದ್ದರು ಎರಡನೇ ಪಂದ್ಯದಲ್ಲಿ ಮುಗ್ಗರಿಸಿತ್ತು. ವಿಶಾಖಪಟ್ಟಣಂನಲ್ಲಿ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು ಕೇವಲ 117 ರನ್ಗಳಿಗೆ ಆಲೌಟ್ ಆಗಿ 10 ವಿಕೆಟ್ಗಳ ಅಂತರದ ಸೋಲು ಅನುಭವಿಸಿದೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತೊಮ್ಮೆ ಎಡಗೈ ವೇಗಿಯ ದಾಳಿಗೆ ತತ್ತರಿಸಿತ್ತು. ಈ ಮೂಲಕ ಎಡಗೈ ವೇಗಿಗಳ ದಾಳಿಗೆ ಭಾರತೀಯ ಆಟಗಾರರು ಕಂಗಾಲಾಗುತ್ತಿರುವುದು ಅಭಿಮಾನಿಗಳ ತಲೆಕೆಡಿಸಿದೆ. ಅಭಿಮಾಣಿಗಳು ಹಾಗೂ ಕ್ರಿಕೆಟ್ ಪಂಡಿತರು ಟೀಮ್ ಇಂಡಿಯಾದ ಆಟಗಾರರು ಎಡಗೈ ವೇಗಿಗಳನ್ನು ಎದುರಿಸಲು ಭಯಗೊಳ್ಳುವುದನ್ನು ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ಬೊಟ್ಟು ಮಾಡುತ್ತಿದ್ದಾರೆ. ಆದರೆ ಆದರೆ ಈ ವಿಚಾರವನ್ನು ಒಪ್ಪಿಕೊಳ್ಳಲು ನಾಯಕ ರೋಹಿತ್ ಶರ್ಮಾ ಮಾತ್ರ ಸಿದ್ಧರಿಲ್ಲ!
ಟೀಮ್ ಇಂಡಿಯಾ ಎಡಗೈ ವೇಗಿಗಳನ್ನು ಎದುರಿಸಲು ಪರದಾಡುವುದು ಇದೇನೂ ಹೊಸತಲ್ಲ. ಆದರೆ ನಾಯಕ ರೋಹಿತ್ ಶರ್ಮಾ ಈ ಬಗ್ಗೆ ಮಾತನಾಡಿದ್ದು ಎಡಗೈ ವೇಗುಗಳು ಎಂಬುದು ಇಲ್ಲ ವಿಚಾರವಲ್ಲ, ಬೌಲರ್ನ ಕೌಶಲ್ಯತೆ ಇಲ್ಲಿ ಪ್ರಮುಖವಾಗುತ್ತದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
"ಎದುರಾಳಿ ತಮಡದಲ್ಲಿ ಗುಣಮಟ್ಟದ ಬೌಲರ್ ಇದ್ದಾನೆ ಎಂದರೆ ಆತನ ಮುಖ್ಯ ಗುರಿ ವಿಕೆಟ್ಗಳನ್ನು ಪಡೆಯುವುದು ಆಗಿರುತ್ತದೆ. ನಿಮ್ಮ ತಂಡದ ಪ್ರಮುಖ ಆಟಗಾರರನ್ನು ಗುರಿಯಾಗಿರಿಸಿ ವಿಕೆಟ್ ಪಡೆಯಲು ನೋಡುತ್ತಾರೆ. ಅದು ಎಡಗೈ ವೇಹುತೇ ಆಗಿರಲಿ ಅಥವಾ ಬಲಗೈ ವೇಗಿಯೇ ಆಗಿರಲಿ. ವಿಕೆಟ್ ದೊರೆಯುತ್ತದೆ. ಬಲಗೈ ವೇಗಿಗಳು ಕೂಡ ನಮಗೆ ಕಷ್ಟ ನೀಡಿದ್ದಾರೆ. ಆದರೆ ಅದನ್ನು ಯಾರೂ ಮಾತನಾಡುವುದಿಲ್ಲ" ಎಂದಿದ್ದಾರೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ.
ಮುಂದುವರಿದು ಮಾತನಾಡಿದ ನಾಯಕ ರೋಹಿತ್ ಶರ್ಮಾ, ಎಡಗೈ ವೇಗಿಯಾ ಅಥವಾ ಬಲಗೈ ವೇಗಿಯಾ ಎಂಬುದನ್ನು ನಾವು ಹೆಚ್ಚಾಗಿ ನೋಡಲು ಹೋಗಲಾರೆವು. ವಿಕೆಟ್ಗಳು ಕಳೆದುಕೊಂಡರೆ ತಂಡಕ್ಕೆ ನಷ್ಟ. ವಿಕೆಟ್ಗಳು ಕಳೆದುಕೊಂಡರೆ ಕಳವಳವುಂಟಾಗುತ್ತದೆ. ಏನೆಲ್ಲಾ ಅಂಶಗಳನ್ನು ನಾವು ಬದಲಾಯಿಸಬಹುದೋ ಅದನ್ನು ಬದಲಾಯಿಸಲು ಪ್ರಯತ್ನಿಸುತ್ತೇವೆ. ಈ ಸೋಲಿನಿಂದ ಹೇಗೆ ಹೊರಗೆ ಬರುವುದು, ನಾವು ಮಾಡಬೇಕಾಗಿರುವುದು ಏನು, ಹೇಗೆ ಮತ್ತಷ್ಟು ಉತ್ತಮವಾದ ಯೋಜನೆಗಳೊಂದಿಗೆ ಮೈದಾನಕ್ಕೆ ಇಳಿಯಬಹುದು" ಈ ಎಲ್ಲಾ ಅಂಶಗಳ ಬಗ್ಗೆ ನಾವು ಇನ್ನಷ್ಟು ಗಮನಹರಿಸಲಿದ್ದೇವೆ" ಎಂದಿದ್ದಾರೆ ನಾಯಕ ರೋಹಿತ್ ಶರ್ಮಾ.
ಮುಂದುವರಿದು ಮಾತನಾಡಿದ ರೋಹಿತ್ ಶರ್ಮಾ "ವೇಗಿಗಳ ವಿರುದ್ಧ ಇನ್ನುಷ್ಟು ಉತ್ತಮವಾಗಿ ಆಡಲು ಯೋಜನೆ ರೂಪಿಸುತ್ತೇವೆ. ಇನ್ನು ಕಳೆದ ಆರು ಏಕದಿನ ಪಂದ್ಯಗಳಲ್ಲಿ ಗಮನಿಸಿದರೆ ಟಾಪ್ ಆರ್ಡರ್ ಆಟಗಾರರಿಂದ ಸಾಕಷ್ಟು ರನ್ಗಳು ಹರಿದು ಬಂದಿವೆ. ಈ ಎಲ್ಲಾ ವಿಚಾರಗಳನ್ನು ನಾವು ಇಷ್ಟು ಸೂಕ್ಷ್ಮವಾಗಿ ಅವಲೋಕಿಸುವ ಅಗತ್ಯವಿದ್ದರೆ ನಾವು ಖಂಡಿತವಾಗಿಯೂ ಅದನ್ನು ಮಾಡಲಿದ್ದೇವೆ" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.