ಭಾರತಕ್ಕೆ ಜಪಾನ್​ನಿಂದ ಯೂನಿಕಾರ್ನ್​; ಚೀನಾಗೆ ಸೆಡ್ಡು ಹೊಡೆದ ಭಾರತ

ಭಾರತಕ್ಕೆ ಜಪಾನ್​ನಿಂದ ಯೂನಿಕಾರ್ನ್​; ಚೀನಾಗೆ ಸೆಡ್ಡು ಹೊಡೆದ ಭಾರತ

ವದೆಹಲಿ: ಯೂನಿಕಾರ್ನ್​ ಸ್ಟೆಲ್​ ವ್ಯವಸ್ಥೆಯನ್ನು ಜಪಾನ್​ ತಯಾರಿಸಿದ್ದು, ಭಾರತ ತನ್ನ ಯುದ್ಧನೌಕೆಗಳಲ್ಲಿ ಬಳಸಲು ನಿರ್ಧರಿಸಿದೆ. ಚೀನಾ ಯುದ್ಧನೌಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ.

ಭಾರತ ಜಪಾನ್​ನಿಂದ ಯುನಿಕಾರ್ನ್ ರಕ್ಷಣಾ ವ್ಯವಸ್ಥೆಯನ್ನು ಆಮದು ಮಾಡಲು ಮುಂದಾಗಿದೆ. ಇದು ನೋಡಲು ಒಂದು ಕೊಂಬಿನಂತೆ ಕಾಣುತ್ತದೆ. ಹೀಗಾಗಿ ಇದನ್ನು ಯುನಿಕಾರ್ನ್​ ಎಂದು ಕರೆಯಲಾಗುತ್ತದೆ. ಇದು ಏನು ಮಾಡುತ್ತದೆ ಎಂದು ಕೇಳುತ್ತೀರಾ?

ಯುನಿಕಾರನ್​ ರಕ್ಷಣಾ ವ್ಯವಸ್ಥೆ ನೌಕೆಯನ್ನು ಶತ್ರುಗಳ ರೆಡಾರ್​​ನಿಂದ ನಾಪತ್ತೆ ಮಾಡಿಬಿಡುತ್ತದೆ! ಶತ್ರುಗಳಿಗೆ ಮಿಸೈಲ್ ಅಪ್ಪಳಿಸುವ ತನಕ ನೌಕೆ ಯಾವ ದಿಕ್ಕಿನಲ್ಲಿದೆ ಎಂದು ಗೊತ್ತಾಗುವುದಿಲ್ಲ. ಇದರಿಂದ ಭಾರತದ ನೌಕೆ ತನ್ನ ಶತ್ರುಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಶತ್ರುಗಳ ಮೇಲೆ ದಾಳಿ ಮಾಡಲು ಇದು ಸಹಾಯ ಮಾಡುತ್ತದೆ.

ಇಂಡೋ ಫೆಸಿಫಿಕ್​ ಹಾಗೂ ಅರೆಬಿಯನ್​ ಸಮುದ್ರದಲ್ಲಿ ಭಾರತದ ಹೆಚ್ಚಿನ ಸರಕು ಸಾಗಟವಾಗುತ್ತದೆ. ಇಲ್ಲಿ ಚೀನಾ ಅನೇಕ ಬಂದರುಗಳನ್ನು ನಿರ್ಮಿಸಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ. ಚೀನಾದಿಂದ ರಕ್ಷಣೆ ಪಡೆಯಲು ಯೂನಿಕಾರ್ನ್​ ಸಹಾಯ ಮಾಡಲಿದೆ.