ಭವಿಷ್ಯದಲ್ಲಿ ಮಿಚೆಲ್ ಸ್ಟಾರ್ಕ್ ಮೀರಿಸಬಲ್ಲ ಭಾರತದ ಮೂವರು ಎಡಗೈ ವೇಗಿಗಳು ಇವರು; ಆದರೆ..

ಭವಿಷ್ಯದಲ್ಲಿ ಮಿಚೆಲ್ ಸ್ಟಾರ್ಕ್ ಮೀರಿಸಬಲ್ಲ ಭಾರತದ ಮೂವರು ಎಡಗೈ ವೇಗಿಗಳು ಇವರು; ಆದರೆ..

ಟೀಮ್ ಇಂಡಿಯಾದ ದಾಂಡಿಗರು ಎಡಗೈ ವೇಗಿಗಳ ವಿರುದ್ಧ ಪರದಾಡುತ್ತಾರೆ ಎಂಬುದು ಅನೇಕ ವರ್ಷಗಳಿಂದ ಕೇಳಿಬರುತ್ತಿರುವ ಆಪಾದನೆ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆಸಿಸ್ ವೇಗಿ ಮಿಚೆಲ್ ಸ್ಟಾರ್ಕ್ ದಾಳಿಗೆ ತತ್ತರಿಸುವ ಮತ್ತೊಮ್ಮೆ ಈ ಆಪಾದನೆಯನ್ನು ನಿಜವಾಗಿಸಿದೆ.

ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಕೇವಲ 117 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಟೀಮ್ ಇಂಡಿಯಾ ಆಸಿಸ್ ತಂಡಕ್ಕೆ ಸುಲಭ ಸವಾಲು ನೀಡಿತ್ತು. ಈ ಸವಾಲನ್ನು ಆಸ್ಟ್ರೇಲಿಯಾ ಯಾವುದೇ ವಿಕೆಟ್ ಕಳೆದುಕೊಳ್ಳದೆ ಮೆಟ್ಟಿ ನಿಂತಿದೆ.

ವಿಶಾಖಪಟ್ಟಣಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕದನವನ್ನು ನೋಡಲು ಕಿಕ್ಕಿರಿದು ತುಂಬಿದ್ದ ಭಾರತದ ಅಭಿಮಾನಿಗಳಿಗೆ ಇದು ಅತ್ಯಂತ ಬೇಸರದ ದಿನವಾಗಿತ್ತು. ಆದರೆ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾಋಕ್‌ಗೆ ಮಾತ್ರ ಇದು ಸ್ಮರಣೀಯ ದಿನವಾಗಿರುವುದರಲ್ಲಿ ಅನುಮಾನವಿಲ್ಲ.

ಇತ್ತ ಭಾರತ ವಿಶ್ವದ ಅತ್ಯುತ್ತಮ ಟಿ20ನ ಲೀಗ್ ಹೊಂದಿದ್ದರೂ ಮಿಚೆಲ್ ಸ್ಟಾರ್ಕ್ ಅವರಂಥಾ ಗುಣಮಟ್ಟದ ಎಡಗೈ ವೇಗಿಯನ್ನು ಸಿದ್ಧಪಡಿಸಲು ಸಾಧ್ಯವಾಗದಿರುವುದು ವಿಪರ್ಯಾಸ. ಆದರೆ ಭಾರತದಲ್ಲಿ ಗುಣಮಟ್ಟದ ಎಡಗೈ ವೇಗಿಗಳು ಎನಿಸಬಲ್ಲ ಸಾಮರ್ಥ್ಯ ಹೊಂದಿರುವ ಕೆಲ ಪ್ರತಿಭಾನ್ವಿತ ವೇಗಿಗಳು ಇದ್ದಾರೆ ಎಂಬುದು ನಿಜ. ಅವರಿಗೆ ಸೂಕ್ತ ಮಾರ್ಗದರ್ಶನ ದೊರೆತದರೆ ಭಾರತದ ಪಾಲಿಗೆ ಅತ್ಯುತ್ತಮ ಎಡಗೈ ವೇಗಿಗಳು ಎನಿಸಿಕೊಳ್ಳಲಿದ್ದಾರೆ. ಅಂಥಾ ಮೂವರು ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ. ಮುಂದೆ ಓದಿ..


ಆಸ್ಟ್ರೇಲಿಯಾ ವಿರುದ್ಧವೇ ಪದಾರ್ಪಣೆ ಮಾಡಿದ್ದ ಟಿ ನಟರಾಜನ್

2020-21ರಲ್ಲಿ ಭಾರತ ಆಸ್ಟ್ರೇಲಿಯಾಗೆ ಪ್ರವಾಸ ಕೈಗೊಂಡು ಬಾರ್ಡರ್-ಗವಾಸ್ಕರ್ ಟ್ರೋಪಿಯಲ್ಲಿ ಕಣಕ್ಕಿಳಿದಿದ್ದಾಗ ಭಾರತದ ಪರವಾಗಿ ಚೊಚ್ಚಲ ಭಾರಿಗೆ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದ ಟಿ ನಟರಾಜನ್ ಆ ಪ್ರವಾಸದಲ್ಲಿ ಮೂರು ಮಾದರಿಯಲ್ಲಿಯೂ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಲ್ಲದೆ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿದ್ದರು. ಸೀಮಿತ ಓವರ್‌ಗಳಲ್ಲಿ ಡೆತ್ ಓವರ್‌ನಲ್ಲಿ ಅದ್ಭುತವಾಗಿ ಬೌಲಿಂಗ್ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ನಟರಾಜನ್ 2021ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು ಅದಾದ ಬಳಿಕ ಒಂದೇ ಒಂದು ಅವಕಾಶ ಪಡೆದುಕೊಂಡಿಲ್ಲ

ಮಿಚೆಲ್ ಸ್ಟಾರ್ಕ್ ಅವರಂತೆಯೇ ವೇಗ ಹೊಂದಿದ್ದಾರೆ ಅರ್ಶ್‌ದೀಪ್ ಸಿಂಗ್

ಪಂಜಾಬ್ ಕಿಂಗ್ಸ್ ತಂಡದ ಆಟಗಾರ ಅರ್ಶ್‌ದೀಪ್ ಸಿಂಗ್ ಅಂತಾರಾಷ್ಟ್ರೀಯ ಟಿ20 ಮಾದರಿಗೆ ಪದಾರ್ಪಣೆ ಮಾಡಿ ಸಾಕಷ್ಟು ಭರವಸೆಯ ಪ್ರದರ್ಶನ ನೀಡಿದ್ದಾರೆ. ಈ ಯುವ ಆಟಗಾರ ಕೆಲ ಸಂದರ್ಭಗಳಲ್ಲಿ ಹಿನ್ನಡೆ ಅನುಭವಿಸಿದರೂ ಒತ್ತಡದ ಸ್ಥಿತಿಯಲ್ಲಿ ಕಮ್‌ಬ್ಯಾಕ್ ಮಾಡಬಲ್ಲ ಅದ್ಭುತ ಸಾಮರ್ಥ್ಯಹೊಂದಿದ್ದಾರೆ. ಈ ಯುವ ಆಟಗಾರನಿಗೆ ಸೂಕ್ತವಾದ ಮಾರ್ಗದರ್ಶನ ದೊರೆತಲ್ಲಿ ಭಾರತದ ಪರವಾಗಿ ದೊಡ್ಡ ಮ್ಯಾಚ್ ವಿನ್ನರ್ ಎನಿಸಿಕೊಳ್ಳಬಲ್ಲರು.

ಮತ್ತೋರ್ವ ಎಡಗೈ ವೇಗಿ ಖಲೀಲ್ ಅಹ್ಮದ್

ಖಲೀಲ್ ಅಹ್ಮದ್ ವಿಕೆಟ್ ಟೇಕಿಂಗ್ ಬೌಲರ್ ಎಂಬುದರಲ್ಲಿ ಅನುಮಾನವಿಲ್ಲ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಖಲೀಲ್ ಅಹ್ಮದ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಹೊಸ ಚೆಂಡಿನೊಂಡಿಗೆ ದಾಳಿ ನಡೆಸುತ್ತಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಖಲೀಲ್ ಅಹ್ಮದ್ ರೋಹಿತ್ ಶರ್ಮಾ ಕೂಡ ಹಿನ್ನಡೆ ಅನುಭವಿಸಿದ್ದರು. ಆದರೆ ಖಲೀಲ್ ಅಹ್ಮದ್ ಭಾರತ ತಂಡದಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಮ್ಮೆಯೂ ಅವಕಾಶ ಪಡೆಯುವಲ್ಲಿ ವಿಫಲವಾಗಿದ್ದಾರೆ.