ಬೇಲೂರು ರಥೋತ್ಸವದ ವೇಳೆ ಕುರಾನ್ ಪಠಣಕ್ಕೆ ಅವಕಾಶ: ಹಿಂದೂಪರ ಸಂಘಟನೆಗಳಿಂದ ತೀವ್ರ ವಿರೋಧ
ಹಾಸನ: ಬೇಲೂರು ರಥೋತ್ಸವ ಜಿಲ್ಲೆಯಲ್ಲೇ ಐತಿಹಾಸಿಕ ರಥೋತ್ಸವವಾಗಿದೆ. ಪ್ರತಿ ವರ್ಷ ಬೇಲೂರು ರಥೋತ್ಸವ ನಡೆಸಲಾಗುತ್ತದೆ. ಈ ರಥೋತ್ಸವದ ಸಂದರ್ಭದಲ್ಲಿ ಕುರಾನ್ ಪಠಣಕ್ಕೆ ಹಿಂದೂಪರ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಅವಕಾಶ ನೀಡಲಾಗಿದೆ.
ಬೇಲೂರು ರಥೋತ್ಸವದ ವೇಳೆ ಕುರಾನ್ ಪಠಣ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವಂತ ರೂಢಿಯಾಗಿದೆ. ಈ ವರ್ಷವೂ ರಥೋತ್ಸವದ ವೇಳೆಯಲ್ಲಿ ಕುರಾನ್ ಪಠಣಕ್ಕೆ ಅವಕಾಶ ನೀಡದಂತೆ ಹಿಂದೂಪರ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದವು.
ಆದ್ರೇ ಇಂದಿನ ಸಭೆಯಲ್ಲಿ ಬೇಲೂರು ರಥೋತ್ಸವದ ವೇಳೆಯಲ್ಲಿ ಕುರಾನ್ ಪಠಣ ಮಾಡುತ್ತಿರುವುದು ಕಳೆದ ಆರು ವರ್ಷಗಳಿಂದ ರೂಢಿಸಿಕೊಂಡು ಬಂದಿರುವಂತ ಪದ್ಧತಿಯಾಗಿದೆ. ಇದನ್ನು ಮುಂದುವರೆಸಬಾರದು ಎಂಬುದಾಗಿ ಹಿಂದೂ ಸಂಘಟನೆಗಳ ನಾಯಕರು ಒತ್ತಾಯಿಸಿದರು.
ಈ ನಡುವೆಯೂ ಜಿಲ್ಲಾಡಳಿತ ಮಾತ್ರ ಇದು ಹಿಂದಿನಿಂದಲೂ ರೂಢಿಸಿಕೊಂಡಿರುವಂತ ಪದ್ಧತಿಯಾಗಿದೆ. ಹೀಗಾಗಿ ಅವಕಾಶ ನೀಡುವುದು ಕರ್ತವ್ಯವಾಗಿದೆ. ಬೇಲೂರು ರಥೋತ್ಸವದ ಎದುರಿನ ಬದಲು, ದೇಗುಲದ ಮೆಟ್ಟಿಲಿನ ಮೇಲೆ ಕುರಾನ್ ಪಠಣ ಮಾಡುವಂತೆ ಅವಕಾಶವನ್ನು ನೀಡಿದೆ.
ಆಭರಣ ಪ್ರಿಯರಿಗೆ ಗುಡ್ನ್ಯೂಸ್ : ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಕುಸಿತ, ಇಲ್ಲಿದೆ ಮಾಹಿತಿ
ಬೆಂಗಳೂರು : ಆಭರಣ ಪ್ರಿಯರಿಗೆ ಖುಷಿಯ ಸುದ್ದಿ ಸಿಕ್ಕಿದ್ದು, ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ನಮ್ಮಲ್ಲಿ ಹೆಚ್ಚಿನವರು ಚಿನ್ನ ಬೆಲೆ ಕುಸಿತಗೊಂಡಾಗ ಖರೀದಿಸಲು ಸಿದ್ದರಾಗುತ್ತಾರೆ. ಇದೀಗ ಚಿನ್ನಾಭರಣ ಬೆಲೆ ಇಳಿಕೆಯನ್ನು ಕಾದು ಕುಳಿತವರಿಗೆ ಸರಿಯಾದ ಸಮಯ ಇದಾಗಿದೆ.
ಗಗನಕ್ಕೇರಿದ ಆಭರಣ ದರದಲ್ಲಿ ಸೋಮವಾರ ದಿಢೀರ್ 330 ರೂ.ಗಳಿಗೆ ಇಳಿಮುಖವಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್ ಚಿನ್ನದ ದರದಲ್ಲಿ 330 ರೂ. ತಗ್ಗಿದ್ದು, 59,720 ರೂ.ಗೆ ತಗ್ಗಿದೆ. 22 ಕ್ಯಾರಟ್ ಬಂಗಾರದ ದರದಲ್ಲಿ 300 ರೂ. ತಗ್ಗಿದ್ದು, 54,750 ರೂ.ಗೆ ಕುಸಿತಗೊಂಡಿದೆ. ಬೆಳ್ಳಿಯ ದರದಲ್ಲಿ ಪ್ರತಿ ಕೆ.ಜಿಗೆ 600 ರೂ. ಇಳಿಕೆಯಾಗಿದ್ದು, 77,100 ರೂ.ನಷ್ಟಿತ್ತು. ಬಂಗಾರದ ದರ 2023-24ರಲ್ಲಿ ದರ 68,000 ರೂ.ಗೆ ಜಿಗಿಯುವ ಸಾಧ್ಯತೆ ಇದೆ ಎಂದು ತಜ್ಞರು ಮಾಹಿತಿ ಬಹಿರಂಗಪಡಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಹಣದುಬ್ಬರದ ಪರಿಣಾಮ ಬಂಗಾರದ ಮೇಲಿನ ಹೂಡಿಕೆಗೆ 10-15% ಆದಾಯ ಸಿಗುವ ಸಾಧ್ಯತೆ ಇದೆ ಎಂದು ಎಲ್ಕೆಪಿ ಸೆಕ್ಯುರಿಟೀಸ್ನ ಉಪಾಧ್ಯಕ್ಷ ಜತೀನ್ ತ್ರಿವೇದಿ ಮಾಹಿತಿ ನೀಡಿದ್ದಾರೆ ಮುಂದಿನ ದಿನಗಳಲ್ಲಿ ಚಿನ್ನಾ ಖರೀದಿಸಲು ಜನರು ಮುಗಿ ಬೀಳುವ ಎಲ್ಲಾ ಸಾಧ್ಯತೆಗಳಿವೆ.