ಬೆಂಗಳೂರು ನಗರದ ರಸ್ತೆ ಮಧ್ಯೆ ಬೃಹತ್ ಗುಂಡಿ ಪತ್ತೆ: ವಾಹನ ಸಂಚಾರದಲ್ಲಿ ವ್ಯತ್ಯಯ
ಬೆಂಗಳೂರು: ನಗರದಲ್ಲಿ ಗುಂಡಿನ ಅವಾಂತರ ಮುಂದುವರೆದಿದೆ. ಬೆಂಗಳೂರು ನಗರದ ರಸ್ತೆ ಮಧ್ಯೆ ಬೃಹತ್ ಗುಂಡಿ ಪತ್ತೆಯಾಗಿದೆ.
ಮಾರುತಿನಗರ ಇಟ್ಟುಮಡು ಮುಖ್ಯರಸ್ತೆಯಲ್ಲಿ ಏಕಾಏಕಿ ರಸ್ತೆ ಕುಸಿತಗೊಂಡಿದೆ. ಡ್ರೈನೇಜ್ ಚೇಂಬರ್ ಪಕ್ಕದಲ್ಲೇ ರಸ್ತೆ ಕುಸಿತಗೊಂಡಿದೆ.ರಸ್ತೆ ಮಧ್ಯೆ ಬೃಹತ್ ಗುಂಡಿ ಬಿದ್ದ ಪರಿಣಾಮ ವಾಹನ ಸಂಚಾರದಲ್ಲಿ ವ್ಯತ್ಯಯವಾಗಲಿದೆ.ಇನ್ನು ಇತ್ತೀಚೆಗೆ ಬೆಂಗಳೂರು ರಸ್ತೆ ಗುಂಡಿಗೆ ಸಾಕಷ್ಟು ಜನ ಬಲಿಯಾಗಿದ್ದರು.ಜೊತೆಗೆ ಅದರ ರಿಪೇರಿ ಉಸಾಬರಿಗೆ ಬಿಬಿಎಂಪಿ ಎಂದಿನಂತೆ ನಿರ್ಲಕ್ಷ್ಯ ತೋರಿದೆ. ಹಾಗಾಗಿ ಉತ್ತರದಾಯಿತ್ವ ಕಾಯ್ದುಕೊಳ್ಳಲು ರಸ್ತೆಗಳಲ್ಲಿ ಗುಂಡಿ ಕಂಡುಬಂದರೆ ಬಿಬಿಎಂಪಿ ಇಂಜಿನಿಯರ್ ಗೆ ದಂಡ ಹಾಕಿ ಎಂದು ಸಾರ್ವಜನಿಕರಿಂದ ಭಾರೀ ಬೇಡಿಕೆ ಬಂದಿದೆ.