ಬೆಂಗಳೂರು ಅತ್ಯಾಚಾರ ಪ್ರಕರಣ: ಯುವತಿ ಸೇರಿ ಮೂವರ ಬಂಧನ
ಬೆಂಗಳೂರು: ಸ್ನೇಹಿತೆ ಮನೆಗೆ ಹೋಗಲು ಖಾಸಗಿ ಕಂಪನಿಯೊಂದರ ಬೈಕ್ ಬುಕ್ ಮಾಡಿದ್ದ ಪಾನಮತ್ತ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಒಟ್ಟು ಮೂವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.ಬಿಹಾರ ಮೂಲದ ಶಹಬುದ್ದೀನ್, ಹುಳಿಮಾವು ನಿವಾಸಿ ಅರಾಫರ್ ಶರೀಪ್ ಹಾಗೂ ಯುವತಿ ಸೇರಿ ಮೂವರನ್ನು ಬಂಧಿಸಲಾಗಿದೆ.