ಬೆಂಗಳೂರು-ಗದಗ ಕೆಎಸ್‌ಆರ್‌ಟಿಸಿ ವೊಲ್ವೋ ಮಾರ್ಗ, ವೇಳಾಪಟ್ಟಿ

ಬೆಂಗಳೂರು-ಗದಗ ಕೆಎಸ್‌ಆರ್‌ಟಿಸಿ ವೊಲ್ವೋ ಮಾರ್ಗ, ವೇಳಾಪಟ್ಟಿ

ಬೆಂಗಳೂರು, ಜನವರಿ 08; ಸಾರಿಗೆ ಸಚಿವ ಬಿ. ಶ್ರೀರಾಮುಲು ಜನವರಿ 9ರಿಂದ ಬೆಂಗಳೂರು-

ನಡುವೆ ಕೆಎಸ್‌ಆರ್‌ಟಿಸಿ ವೊಲ್ವೋ ಬಸ್ ಸೇವೆ ಆರಂಭವಾಗಲಿದೆ ಎಂದು ಹೇಳಿದ್ದರು.

ಬಸ್ ವೇಳಾಪಟ್ಟಿ, ಸಾಗುವ ಮಾರ್ಗವನ್ನು ಈಗ ಘೋಷಣೆ ಮಾಡಲಾಗಿದೆ.

ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಟ್ವೀಟ್‌ ಮೂಲಕ ಮಾಡಿದ್ದ ಮನವಿಗೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಸ್ಪಂದಿಸಿದ್ದರು. ಜನವರಿ 9ರಿಂದಲೇ ಬೆಂಗಳೂರು-ಗದಗ ನಡುವೆ ಐರಾವತ ವೊಲ್ವೋ ಬಸ್ ಸೇವೆ ಆರಂಭಿಸುವುದಾಗಿ ಹೇಳಿದ್ದರು.ಬೆಂಗಳೂರು-ಗದಗ ನಡುವಿನ ವೊಲ್ವೋ ಬಸ್ ಚಿತ್ರದುರ್ಗ, ಹರಿಹರ, ಮುಂಡರಗಿ ಮಾರ್ಗವಾಗಿ ಸಂಚಾರ ನಡೆಸಲಿದೆ ಎಂದು ಕೆಎಸ್‌ಆರ್‌ಟಿಸಿ ಹೇಳಿದೆ. ಸೋಮವಾರದಿಂದ ಈ ಬಸ್ ಸೇವೆ ಆರಂಭವಾಗಲಿದೆ.ವೇಳಾಪಟ್ಟಿ; ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್-1 ರಿಂದ ಮಧ್ಯಾಹ್ನ 2 ಗಂಟೆಗೆ ಐರಾವತ ಬಸ್‌ ಹೊರಡಲಿದೆ. ನವರಂಗ್, ಯಶವಂತಪುರ ಗೋವರ್ಧನ್ ಚಿತ್ರಮಂದಿರ, ಗೊರಗುಂಟೆಪಾಳ್ಯ ಕೆಎಲ್‌ಇ ಡೆಂಟಲ್ ಕಾಲೇಜು, ಜಾಲಹಳ್ಳಿ ಕ್ರಾಸ್, ನೆಲಮಂಗಲ ಮೂಲಕ ಬಸ್ ಸಾಗಲಿದೆ.

ಬೆಂಗಳೂರಿನಿಂದ ಹೊರಟ ಬಸ್ ದಾವಣಗೆರೆಮ ಹರಿಹರ, ಹರಪನಹಳ್ಳಿ, ಹೂವಿನ ಹಡಗಲಿ, ಮುಂಡರಗಿ ಮೂಲಕ ಸಾಗಿ 6.15ಕ್ಕೆ ಗದಗ ತಲುಪಲಿದೆ.

ಸುನಿಲ್ ಜೋಶಿ ಟ್ವೀಟ್ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಗದಗಕ್ಕೆ ಐರಾವತ ಬಸ್ ಬೇಕು ಎಂದು ಟ್ವೀಟ್ ಮಾಡಿ ಕರ್ನಾಟಕದ ಮುಖ್ಯಮಂತ್ರಿಗಳ ಖಾತೆ, ಬಸವರಾಜ ಬೊಮ್ಮಾಯಿ ವೈಯಕ್ತಿಕ ಖಾತೆಯನ್ನು ಟ್ಯಾಗ್ ಮಾಡಿದ್ದರು.

'ನನ್ನ ವಿನಯ ಪೂರ್ವಕ ಮನವಿ ಬೆಂಗಳೂರಿನಿಂದ ಗದಗಕ್ಕೆ ವೊಲ್ವೋ ಬಸ್ ಸೇವೆ ಆರಂಭವಾಗಬೇಕು. ಇದಕ್ಕಾಗಿ ನಾವು 25 ವರ್ಷಗಳಿಂದ ಕಾಯುತ್ತಿದ್ದೇವೆ. ಇದು 'ಐರಾವತ' ಬಸ್ ಗದಗಕ್ಕೆ ಬರುವ ಸಮಯ' ಎಂದು ಹೇಳಿದ್ದರು.

ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದ ಬಿ. ಶ್ರೀರಾಮುಲು ಜನವರಿ 9ರ ಸೋಮವಾದಿಂದಲೇ ಬೆಂಗಳೂರು-ಗದಗ ನಡುವೆ ಐರಾವತ ಬಸ್ ಸೇವೆ ಆರಂಭ ಮಾಡುತ್ತೇವೆ ಎಂದು ತಿಳಿಸಿದ್ದರು