ಬಿಜೆಪಿ ಒಂದು ಸುಳ್ಳಿನ ವಿಶ್ವವಿದ್ಯಾಲಯ : ಡಿ.ಕೆ.ಶಿವಕುಮಾರ್ ಲೇವಡಿ

ಹುಬ್ಬಳ್ಳಿ : ಬಿಜೆಪಿ ಒಂದು ಸುಳ್ಳಿನ ವಿಶ್ವವಿದ್ಯಾಲಯ ಇದ್ದಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಹಾದಾಯಿ ಯೋಜನೆ ವಿಚಾರದಲ್ಲಿ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮಹಾದಾಯಿ ವಿಚಾರದಲ್ಲಿ ಮೂರುವರೆ ವರ್ಷ ಏನೂ ಮಾಡಲಿಲ್ಲ.ಆಪರೇಷನ್ ಕಮಲ ಮಾಡಿ ನಮ್ಮವರನ್ನು ಸೆಳೆದುಕೊಂಡಿದ್ದಾರೆ. ರೈತರು, ಸಂಘಟನೆಗಳು, ಕಲಾವಿದರು ಹೋರಾಟ ಮಾಡಿದ್ದಾರೆ. ನಾವು ಧ್ವನಿ ಎತ್ತಿ ಹೋರಾಟವನ್ನು ಒಂದು ಹಂತಕ್ಕೆ ತಂದಿದ್ದೇವೆ ಎಂದರು.
ರಾಜ್ಯದಲ್ಲಿ ಬಿಜೆಪಿಯ 26 ಸಂಸದರು ಇದ್ದಾರೆ. ಸುಮಲತಾ ಬಿಜೆಪಿಯ ಅಸೋಸಿಯೇಟ್ ಮೆಂಬರ್, ಡಿ.ಕೆ.ಸುರೇಶ್, ಪ್ರಜ್ವಲ್ ರೇವಣ್ಣರನ್ನು ಬಿಟ್ಟು ಬಿಡಿ,ಉಳಿದ 26 ಸಂಸದರು ಮಹಾದಾಯಿ ವಿಚಾರವಾಗಿ ಪ್ರಧಾನಿ ಮೋದಿ ಅವರನ್ನು ಯಾಕೆ ಭೇಟಿಯಾಗಿಲ್ಲ ಎಂದು ಹೇಳಿದ್ದಾರೆ.