ಬಾಕ್ಸ್ ಆಫೀಸ್​​ನಲ್ಲಿ 'ಅಣ್ಣಾಥೆ' ಗಳಿಸಿದ್ದೆಷ್ಟು? ಗಲ್ಲಾಪೆಟ್ಟಿಗೆ ಪುಡಿ ಮಾಡಿದ ರಜನಿ ಸಿನಿಮಾ

ಬಾಕ್ಸ್ ಆಫೀಸ್​​ನಲ್ಲಿ 'ಅಣ್ಣಾಥೆ' ಗಳಿಸಿದ್ದೆಷ್ಟು? ಗಲ್ಲಾಪೆಟ್ಟಿಗೆ ಪುಡಿ ಮಾಡಿದ ರಜನಿ ಸಿನಿಮಾ
ಕರ್ನಾಟಕ ಹಾಗೂ ಆಂಧ್ರ ಸೇರಿ ಮತ್ತಿತರ ರಾಜ್ಯಗಳಲ್ಲೂ ಈ ಸಿನಿಮಾ ದೊಡ್ಡ ಮಟ್ಟದಲ್ಲೇ ರಿಲೀಸ್​ ಆಗಿದೆ. ವಿಶ್ವ ಮಟ್ಟದಲ್ಲಿ ಈ ಸಿನಿಮಾ ಮೊದಲ ದಿನ 70 ಕೋಟಿ ಗಳಿಕೆ ಮಾಡಿತ್ತು.

ರಜನಿಕಾಂತ್​ ನಟನೆಯ 'ಅಣ್ಣಾಥೆ' ದೀಪಾವಳಿ ನಿಮಿತ್ತ ನವೆಂಬರ್​ 4ರಂದು ರಿಲೀಸ್​ ಆಗಿತ್ತು.

ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಕಮಾಲ್​ ಮಾಡುತ್ತಿದೆ. ಮೊದಲ ದಿನವೇ ಅದ್ಭುತ ಗಳಿಕೆ ಮಾಡಿದ್ದ ಈ ಚಿತ್ರದ ಗಳಿಕೆ ಐದು ದಿನಗಳಲ್ಲಿ 150 ಕೋಟಿ ರೂಪಾಯಿ ದಾಟಿದೆ. ಇದನ್ನು ಕೇಳಿ ಅಭಿಮಾನಿಗಳು ಸಖತ್​ ಖುಷಿಯಾಗಿದ್ದಾರೆ. ಶೀಘ್ರದಲ್ಲೇ ಸಿನಿಮಾ 200 ಕೋಟಿ ಕ್ಲಬ್​ ಸೇರುವ ಸಾಧ್ಯತೆ ಇದೆ. ತಮಿಳುನಾಡಿನಲ್ಲಿ ಭಾರೀ ಮಳೆ ಆಗುತ್ತಿದೆ. ಕೆಲವು ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದಾಗ್ಯೂ ಜನರು ಸಿನಿಮಾ ನೋಡೋಕೆ ತೆರಳುತ್ತಿದ್ದಾರೆ. 'ಅಣ್ಣಾಥೆ' ಅಭಿಮಾನಿಗಳ ಪಾಲಿಗೆ ಪರ್ಫೆಕ್ಟ್​ ದೀಪಾವಳಿ ಉಡುಗೊರೆ ಆಗಿದೆ.

'ಅಣ್ಣಾಥೆ' ಚಿತ್ರ ವಿಶ್ವಾದ್ಯಂತ ಸುಮಾರು 2200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ತಮಿಳುನಾಡು ಒಂದರಲ್ಲೇ 800ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಜನಿಕಾಂತ್ ಸಿನಿಮಾ ತೆರೆಗೆ ಬಂದಿದೆ. ಕರ್ನಾಟಕ ಹಾಗೂ ಆಂಧ್ರ ಸೇರಿ ಮತ್ತಿತರ ರಾಜ್ಯಗಳಲ್ಲೂ ಈ ಸಿನಿಮಾ ದೊಡ್ಡ ಮಟ್ಟದಲ್ಲೇ ರಿಲೀಸ್​ ಆಗಿದೆ. ವಿಶ್ವ ಮಟ್ಟದಲ್ಲಿ ಈ ಸಿನಿಮಾ ಮೊದಲ ದಿನ 70 ಕೋಟಿ ಗಳಿಕೆ ಮಾಡಿತ್ತು. ನವೆಂಬರ್​​ 5ರಂದು ಸಿನಿಮಾ 42.6 ಕೋಟಿ ರೂಪಾಯಿ, ನವೆಂಬರ್​ 6ರಂದು ಚಿತ್ರ 33.71 ಕೋಟಿ ಗಳಿಸಿದೆ. ಭಾನುವಾರ ಸಿನಿಮಾ ಗಳಿಕೆ 28.20 ಕೋಟಿ ಹಾಗೂ ಸೋಮವಾರ 11.85 ಕೋಟಿ ಬಾಚಿಕೊಂಡಿದೆ. ಈ ಮೂಲಕ ಸಿನಿಮಾ ಕಲೆಕ್ಷನ್​ 186.58 ಕೋಟಿ ರೂಪಾಯಿ ಆಗಿದೆ.

ಬಾಕ್ಸ್​ ಆಫೀಸ್​ ತಜ್ಞ ಮನೋಬಲ ವಿಜಯ ಬಾಲನ್​ ಐದನೇ ದಿನದ ಕಲೆಕ್ಷನ್​ ಕುರಿತು ಮಾಹಿತಿ ನೀಡಿದ್ದಾರೆ. 'ಮುಂಜಾನೆಯಿಂದಲೇ ಚೆನ್ನೈನಲ್ಲಿ ಮಳೆ ಆಗುತ್ತಿದೆ. ಆದಾಗ್ಯೂ ರಜನಿಕಾಂತ್ ಅಭಿನಯದ ಅಣ್ಣಾಥೆ ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಿದೆ' ಎಂದು ಬರೆದುಕೊಂಡಿದ್ದಾರೆ.

'ಅಣ್ಣಾಥೆ' ಸಿನಿಮಾವನ್ನು ಸನ್​ ಪಿಕ್ಚರ್ಸ್​ ನಿರ್ಮಾಣ ಮಾಡಿದೆ. ರಜನಿಕಾಂತ್​, ಕೀರ್ತಿ ಸುರೇಶ್​, ನಯನತಾರಾ, ಮೀನಾ, ಖುಷ್ಬು, ಪ್ರಕಾಶ್ ರಾಜ್, ಜಗಪತಿ ಬಾಬು ಮೊದಲಾದವರು ಪಾತ್ರವರ್ಗದಲ್ಲಿದ್ದಾರೆ. ದೀಪಾವಳಿ ನಿಮಿತ್ತ ಈ ಸಿನಿಮಾ ನವೆಂಬರ್​ 4ರಂದು ತೆರೆಗೆ ಬಂದಿದೆ. ಚಿತ್ರಕ್ಕೆ ಎಲ್ಲ ಕಡೆಗಳಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ