ಫೆಬ್ರವರಿ 23ಕ್ಕೆ ಸಂಡೂರಿಗೆ ಅಮಿತ್ ಶಾ ಭೇಟಿ: ವಿವಿಧ ಕಾರ್ಯಕ್ರಮದಲ್ಲಿ ಭಾಗಿ

ಬಳ್ಳಾರಿ: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ರಾಜಕೀಯ ಚಟುವಟಿಕೆಗಳು ರಂಗೇರಿದೆ. ಈಗಾಗಲೇ ರಾಜಕೀಯ ವಲಯ ನಾಯಕರು ಮತದಾರರನ್ನು ಸೆಳೆಯಲು ನಾನಾ ತಯಾರಿಗಳು ನಡೆಯುತ್ತಿವೆ.
ಬಿಜೆಪಿ ಕೇಂದ್ರ ನಾಯಕರು ಆಗಾಗ ರಾಜ್ಯಕ್ಕೆ ಬರುತ್ತಿದ್ದಾರೆ.
ಫೆಬ್ರವರಿ 22 ರಂದು ರಾತ್ರಿ ಜಿಂದಾಲ್ನಲ್ಲಿರುವ ಹಯಾತ್ ಹೋಟೆಲ್ನಲ್ಲಿ ಶಾ ತಂಗಲಿದ್ದಾರೆ.ಸಂಡೂರಿನಲ್ಲಿ ಮತದಾರರನ್ನು ಸೆಳೆಯಲು ನಾನಾ ಕಸರತ್ತು ಮಾಡಲಾಗಿದೆ. ಇನ್ನು ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ಸಂಡೂರು ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.