ಪ್ರಿಯತಮೆಯನ್ನು ಭೇಟಿಯಾಗಲು ಮಧ್ಯರಾತ್ರಿ ಮನೆಗೆ ಬಂದ ಯುವಕ; ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದು ಪರದಾಟ

ಯುವಕನೊಬ್ಬ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಆಕೆಯ ಮನೆಗೆ ಮಧ್ಯರಾತ್ರಿ ಭೇಟಿ ನೀಡಿದ್ದು, ಈ ವೇಳೆ ಉಂಟಾದ ಸದ್ದಿನಿಂದಾಗಿ ಮನೆಯವರು ಎಚ್ಚೆತ್ತಾಗ ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದು ಪರದಾಡಿದ್ದಾನೆ.
ಇಂತಹದೊಂದು ಘಟನೆ ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ನಡೆದಿದ್ದು, ಅಲ್ಲಿನ ಗ್ರಾಮವೊಂದರ ಯುವಕ ಅದೇ ಗ್ರಾಮದಲ್ಲಿ ತಾನು ಪ್ರೀತಿಸುತ್ತಿದ್ದ ಯುವತಿ ಮನೆಗೆ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಭೇಟಿ ನೀಡಿದ್ದಾನೆ.
ಆಗ ಗಾಬರಿಗೊಂಡ ಆತ ತಪ್ಪಿಸಿಕೊಳ್ಳಲು ಓಡಿದ್ದು, ತೆರೆದ ಬಾವಿಗೆ ಬಿದ್ದಿದ್ದಾನೆ. ಈ ಗಲಾಟೆಯಿಂದ ಅಕ್ಕಪಕ್ಕದ ಮನೆಯವರು ಸಹ ಎಚ್ಚೆತ್ತಿದ್ದು ಬಾವಿಯ ಸುತ್ತಲೂ ಸೇರಿದ್ದಾರೆ. ಕಡೆಗೂ ಕಷ್ಟಪಟ್ಟು ಆತನನ್ನು ಮೇಲಕ್ಕೆ ಎತ್ತಲಾಗಿದೆ.
ಇದರ ಮಧ್ಯೆ ಯುವತಿಯ ಕುಟುಂಬಸ್ಥರು ಪಂಚಾಯಿತಿಯವರಿಗೆ ದೂರು ನೀಡಿದ್ದು, ಆದರೆ ಪ್ರಕರಣ ಸುಖಾಂತ್ಯವಾಗಿದೆ. ಇವರ ಪ್ರೇಮ ಪ್ರಕರಣವನ್ನು ಅರಿತ ಹಿರಿಯರೆಲ್ಲರೂ ಸೇರಿ ದೇವಸ್ಥಾನದಲ್ಲಿ ಇವರಿಬ್ಬರ ವಿವಾಹ ನೆರವೇರಿಸಿದ್ದಾರೆ.