ಪ್ರತಿಷ್ಠಿತ ಉದ್ಯೋಗಿಗಳಿಗೆ ಬಿಗ್ ಶಾಕ್ ಕಂಪನಿಯಿಂದ ಶೇ 20ಕ್ಕೂ ಹೆಚ್ಚು ನೌಕರರು ವಜಾ

ಪ್ರತಿಷ್ಠಿತ   ಉದ್ಯೋಗಿಗಳಿಗೆ ಬಿಗ್ ಶಾಕ್   ಕಂಪನಿಯಿಂದ ಶೇ 20ಕ್ಕೂ ಹೆಚ್ಚು ನೌಕರರು ವಜಾ

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಟೆಕ್ ಕಂಪನಿ ಯಾಹೂ ತಂತ್ರಜ್ಞಾನ ಘಟಕದ ಪುನರ್​​ರಚನೆ ಪ್ರಕ್ರಿಯೆಯ ಭಾಗವಾಗಿ ಶೇ 20ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಶುಕ್ರವಾರ ಘೋಷಿಸಿದೆ.

ವಾಲ್ಟ್ ಡಿಸ್ನಿ 7,000 ಮಂದಿ ಉದ್ಯೋಗಿಗಳ ವಜಾ ಘೋಷಿಸಿದ ಬೆನ್ನಲ್ಲೇ ಟೆಕ್ ಕಂಪನಿ ಯಾಹೂ (Yahoo) ಕೂಡ ಶೇ 20ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳನ್ನು ಕಡಿತ ಮಾಡಲು ಮುಂದಾಗಿದೆ.

ಈ ಕಡಿತವು ಈ ವಾರದ ಸುಮಾರು 1,000 ಉದ್ಯೋಗಿಗಳನ್ನು ಒಳಗೊಂಡಂತೆ ಈ ವರ್ಷದ ಅಂತ್ಯದ ವೇಳೆಗೆ Yahoo ನ ಜಾಹೀರಾತು ತಂತ್ರಜ್ಞಾನದ ಸುಮಾರು 50% ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕಂಪನಿ ಹೇಳಿದೆ.