ತುಮಕೂರು: ಮನೆ ಬಳಿಯ ಕಟ್ಟೆಗೆ ಕಾಲು ಜಾರಿ ಬಿದ್ದು ಪುಟಾಣಿ ಅಕ್ಕ-ತಂಗಿಯರ ದಾರುಣ ಸಾವು
ತುಮಕೂರು: ಪುಟಾಣಿ ಅಕ್ಕ- ತಂಗಿಯರು ಮನೆ ಬಳಿಯ ಕಟ್ಟೆಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ (Death) ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ಬಳಿಯ ವರಣಸಂದ್ರದಲ್ಲಿ ನಡೆದಿದೆ.
ನಿನ್ನೆ (ನವೆಂಬರ್ 18) ಸಂಜೆ 5 ಗಂಟೆಗೆ ಈ ಘಟನೆ ನಡೆದಿದ್ದು, ಮಕ್ಕಳನ್ನು ಕಳೆದುಕೊಂಡು ಪೋಷಕರು ರೋಧಿಸುತ್ತಿದ್ದಾರೆ. ಸದ್ಯ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.