ಪರ್ಸಂಟೇಜ್ ವಿಚಾರದಲ್ಲಿ ತನಿಖೆ ಕುರಿತು ಸಿಎಂ ತೀರ್ಮಾನಿಸುತ್ತಾರೆ : ಸಚಿವ ಈಶ್ವರಪ್ಪ

ಪರ್ಸಂಟೇಜ್ ವಿಚಾರದಲ್ಲಿ ತನಿಖೆ ಕುರಿತು ಸಿಎಂ ತೀರ್ಮಾನಿಸುತ್ತಾರೆ : ಸಚಿವ ಈಶ್ವರಪ್ಪ

ಬೆಳಗಾವಿ,ಡಿ.16- ಪರ್ಸಂಟೇಜ್ ವಿಚಾರದಲ್ಲಿ ನ್ಯಾಯಾಂಗ ತನಿಖೆ ಮಾಡಬೇಕೆಂಬ ಪ್ರತಿಪಕ್ಷಗಳು ಆಗ್ರಹಿಸಿದರೆ, ಆ ಬಗ್ಗೆ ಮುಖ್ಯಮಂತ್ರಿಗಳೇ ತೀರ್ಮಾನಿಸುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ತನಿಖೆಯನ್ನು ಸ್ವಾಗತಿಸುತ್ತೇವೆ. ತನಿಖೆಯಿಂದ, ಯಾರು ಯಾರಿಂದ ಎಷ್ಟು ಪರ್ಸಂಟೇಜ್ ತೆಗೆದುಕೊಂಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಕಾಂಗ್ರೆಸ್‍ನವರೇ ಸಿಕ್ಕಿ ಬೀಳುತ್ತಾರೆ ಎಂದು ಆರೋಪಿಸಿದರು.

ಸರ್ಕಾರದ ವಿರುದ್ಧ 40% ಕಮಿಷನ್ ಸರ್ಕಾರ ಎಂದು ಆರೋಪಿಸಿ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಅವೇಶನದಲ್ಲಿ ಚರ್ಚೆ ಮಾಡಿದರೆ ಅದಕ್ಕೆ ಸಿದ್ದ ಎಂದರು.

ಯಾವ ಇಲಾಖೆಯಿಂದ ಯಾವ ಯೋಜನೆಗೆ ಎಷ್ಟು ಹಣ ನೀಡಲಾಗಿದೆ ಎಂಬುದನ್ನು ಹೇಳಿದ್ದಾರೆಯೇ? ಟ್ರ್ಯಾಕ್ಟರ್ ರ್ಯಾ ಮಾಡುತ್ತಿರುವುದು ನಾಟಕವಷ್ಟೇ. ಪರ್ಸಂಟೇಜ್ ಬಗ್ಗೆ ಕಾಂಗ್ರೆಸ್‍ನವರು ನ್ಯಾಯಾಂಗ ತನಿಖೆ ಕೇಳುತ್ತಿದ್ದಾರೆ. ಸಿಎಂ ತೀರ್ಮಾನ ಮಾಡುತ್ತಾರೆ. ತನಿಖೆಯಾದರೆ ಕಾಂಗ್ರೆಸ್‍ನವರಿಗೆ ಶಿಕ್ಷೆಯಾಗುತ್ತದೆ ಎಂದು ಹೇಳಿದರು.