ಪತ್ನಿ ಎರಡು ಕಾಯ್ದೆಗಳಡಿ ಜೀವನಾಂಶಕ್ಕೆ ಅರ್ಹಳು: ಹೈಕೋರ್ಟ್ ಮಹತ್ವದ ತೀರ್ಪು

ಪತ್ನಿ ಎರಡು ಕಾಯ್ದೆಗಳಡಿ ಜೀವನಾಂಶಕ್ಕೆ ಅರ್ಹಳು: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: 'ಕೌಟುಂಬಿಕ ಕಲಹ ಪ್ರಕರಣದಲ್ಲಿ, ಪತ್ನಿಯು ಪತಿಯಿಂದ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ & ಹಿಂದೂ ವಿವಾಹ ಕಾಯ್ದೆಯಡಿ ಎರಡರಿಂದಲೂ ಜೀವನಾಂಶ ಪಡೆ ಯಲು ಅವಕಾಶವಿದೆ' ಎಂದು ಹೈಕೋರ್ಟ್ ಸ್ಪಷ್ಟಪಡಿಸಿದ್ದು, 'ಜೀವನಾಂಶದ ಪ್ರಮಾಣವನ್ನು ನ್ಯಾಯಾಲಯವೇ ಹೊಂದಾಣಿಕೆ ಮಾಡ ಬಹುದು' ಎಂದು ಅಭಿಪ್ರಾಯಪಟ್ಟಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.