ಪತ್ನಿಯ ಮೃತದೇಹವನ್ನು ಹೊಲದಲ್ಲಿ ಹೂತು ಅದರ ಮೇಲೆ ರಾಗಿ ಬೇಸಾಯ ಮಾಡಿದ ಪತಿ..!
ಘಾಜಿಯಾಬಾದ್ (ಉತ್ತರ ಪ್ರದೇಶ): ಅಕ್ರಮ ಸಂಬಂಧ ಶಂಕೆಯಿಂದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಹೊಲದಲ್ಲಿ ಗುಂಡಿ ತೆಗೆದು 30 ಕೆಜಿ ಉಪ್ಪು ಹಾಕಿ ಹೂತಿದ್ದಾನೆ.
ಅಷ್ಟೇ ಅಲ್ಲದೇ, ಅದೇ ಜಾಗದಲ್ಲಿ ರಾಗಿ ಬೇಸಾಯ ಕೂಡ ಮಾಡಿದ್ದಾನೆ.
ಜನವರಿ 29 ರಂದು ಆರೋಪಿ ಪತಿ ದಿನೇಶ್ ತನ್ನ ಹೆಂಡತಿ ಅಂಜು ಜನವರಿ 26ರ ಬೆಳಿಗ್ಗೆ 5 ಗಂಟೆಯಿಂದ ಇದ್ದಕ್ಕಿದ್ದಂತೆ ಎಲ್ಲೋ ಹೋಗಿದ್ದಾಳೆ.
ನನಗೆ ಯಾವುದೇ ಸುಳಿವು ನೀಡಿಲ್ಲ ಎಂದು ಭೋಜ್ಪುರ ಠಾಣೆಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾನೆ.
ದಿನೇಶ್ ದೂರಿನ ಮೇರೆಗೆ, ಗಾಜಿಯಾಬಾದ್ನ ಭೋಜ್ಪುರ ಪೊಲೀಸ್ ಠಾಣೆಯಲ್ಲಿ ಮಹಿಳೆಯ ನಾಪತ್ತೆಯ ತನಿಖೆಯನ್ನು ಪೊಲೀಸರು ಪ್ರಾರಂಭಿಸಿದರು.
ಪೊಲೀಸರು ತನಿಖೆಯನ್ನು ಪ್ರಾರಂಭಿಸಿದಾಗ, ವಿಚಾರಣೆಯ ಸಮಯದಲ್ಲಿ, ಪೊಲೀಸರು ಆಕೆಯ ಪತಿಯನ್ನು ಅನುಮಾನಿಸಿದ್ದರು.
ಈ ವೇಳೆ, ದಿನೇಶ್ನನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು ಕೊಲೆಯ ಮಾಹಿತಿಯನ್ನು ಬಾಯ್ಬಿಡಿಸಿದ್ದು,
ದಿನೇಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಪತಿಯನ್ನು ಬಂಧಿಸಿರುವ ಪೊಲೀಸರು ಮಹಿಳೆಯ ಮೃತದೇಹವನ್ನು ಹೊಂಡದ ಗುಂಡಿಯಿಂದ ಹೊರತೆಗೆದಿದ್ದಾರೆ.
ನನ್ನ ಪತ್ನಿಗೆ ಬೇರೊಬ್ಬನ ಜತೆ ಪ್ರೇಮಾಂಕುರವಾಗಿತ್ತು ಎಂಬ ಕಾರಣಕ್ಕೆ ಪತ್ನಿ ಅಂಜುಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದು, ಬಳಿಕ ಶವವನ್ನು ಹೊಲದಲ್ಲಿ ಹೂತು,
ಶವ ಬೇಗ ಕರಗಲೆಂದು 30 ಕೆಜಿ ಉಪ್ಪು ಸುರಿದಿದ್ದಾನೆ. ನಂತ್ರ, ಅದರ ಮೇಲೆ ಮಣ್ಣು ಹಾಕಿ ರಾಗಿ ಬೇಸಾಯ ಮಾಡಿದ್ದಾನೆ.